ಅನುರಾಗ ವಠಾರದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ

0

ಪುತ್ತೂರು:ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಅನುರಾಗ ವಠಾರದಲ್ಲಿ ಫೆ.22ರಂದು ನಡೆಯಿತು. ಅಧ್ಯಕ್ಷತೆಯನ್ನು ನರಿಮೊಗರಿನ ಸರಸ್ವತಿ ವಿದ್ಯಾಮಂದಿರದ ಸ್ಥಾಪಕ ಅವಿನಾಶ ಕೋಡಂಕಿರಿ ವಹಿಸಿ ಮಾತನಾಡಿ, ಯಕ್ಷಗಾನ, ನಾಟಕ ಇತ್ಯಾದಿ ಯಾವುದೇ ಪ್ರಕಾರದ ಪ್ರದರ್ಶನಗಳಲ್ಲಿ ನೋಡುಗರ ಮನರಂಜನೆಗಾಗಿ ಹಾಸ್ಯ ಪಾತ್ರವು ಅತ್ಯಂತ ಅಗತ್ಯವಾಗಿದ್ದು ಅದು ಪ್ರದರ್ಶನದ ಅವಿಭಾಜ್ಯ ಅಂಗವಾಗಿದೆ ಎಂದರು. ಅವರು ತಮ್ಮ ಜೀವನದಲ್ಲಿ ನಡೆದ ಹಲವು ಹಾಸ್ಯ ಪ್ರಸಂಗಗಳನ್ನು ಹೇಳಿ ಸಭಿಕರ ಮನರಂಜಿಸಿದರು.

ಕವಿತಾ ಅಡೂರು ಅವರು ಡಿ.ವಿ.ಜಿ ಅವರ ಕೆಲವು ಆಯ್ದ ಕಗ್ಗಗಳ ಬಗ್ಗೆ ವಿವರಿಸಿ ಅವುಗಳ ಮೇಲ್ಮೆಯನ್ನು ಮನದಟ್ಟು ಮಾಡಿಸಿ ಕೇಳುಗರ ಕುತೂಹಲವನ್ನು ತಣಿಸಿದರು. ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ಎಸ್. ಆರ್. ನಾಯಕ್, ಅಕ್ಷರ, ಶಂಕರಿ ಶರ್ಮ ಮುಂತಾದವರು ತಮ್ಮ ನಗೆ ಚಟಾಕಿಗಳಿಂದ ಸಭಿಕರನ್ನು ರಂಜಿಸಿದರು.

ಸಂಘದ ಅಧ್ಯಕ್ಷ ಸತ್ಯೇಶ್ ಕೆದಿಲಾಯ ಸ್ವಾಗತಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಪರಿಚಯಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ದತ್ತಾತ್ರೇಯ ರಾವ್ ಅವರು ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶರ್ಮರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

LEAVE A REPLY

Please enter your comment!
Please enter your name here