ವಿಟ್ಲ: ಅಂಗಡಿಯಲ್ಲಿ ಬೆಂಕಿ ಅನಾಹುತ

0

ವಿಟ್ಲ: ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಉಂಟಾದ ಘಟನೆ ವಿಟ್ಲ ಪೇಟೆಯ ಹೃದಯಭಾಗದಲ್ಲಿ ನಡೆದಿದೆ.


ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರಿಗೆ ಸೇರಿದ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಮಾಲಕರು ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಆ ಬಳಿಕ ಅಂಗಡಿ ಒಳಗಡೆಯಿಂದ ಹೊಗೆ ಕಾಣಿಸಿಕೊಂಡು ತತ್ ಕ್ಷಣ ಬೆಂಕಿ ಹಬ್ಬಿದೆ. ಪಕ್ಕದ ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಅವರು ತನ್ನ ಅಂಗಡಿಯಲ್ಲಿದ್ದ ಫೈ ರ್‌ಗ್ಯಾಸ್ ಮೂಲಕ ಬೆಂಕಿ ನಂದಿಸಿದ್ದಾರೆ.

ಘಟನೆಯಲ್ಲಿ ಅಂಗಡಿಯಲ್ಲಿದ್ದ ಕೆಲವು ವಸ್ತುಗಳಿಗೆ ಹಾನಿಯಾಗಿವೆ.

LEAVE A REPLY

Please enter your comment!
Please enter your name here