ಕಡಬ ಶ್ರೀ ಕಡಂಬಳಿತ್ತಾಯ ದೈವಸ್ಥಾನಕ್ಕೆ ರಾಮಸೇನೆಯ ಗೋಪಾಲ ನಾೖಕ್‌ ರಿಂದ ನಗದು ದೇಣಿಗೆ

0

ಕಡಬ: ಇಲ್ಲಿನ ಶ್ರೀ ಕಡಂಬಳಿತ್ತಾಯ ದೈವಸ್ಥಾನದಲ್ಲಿ ಕಡಂಬಳಿತ್ತಾಯ ದೈವದ ನೂತನ ವಿಗ್ರಹ ಸ್ಥಾಪನೆ ಕಾರ್ಯಕ್ರಮಕ್ಕೆ ರಾಮಸೇನೆಯ ಪುತ್ತೂರು ಜಿಲ್ಲಾ ಅಧ್ಯಕ್ಷ ಗೋಪಾಲ ನಾೖಕ್‌ ಮೇಲಿನ ಮನೆ ಅವರು ರೂ.25,000 ರೂ. ನಗದನ್ನು ದೇಣಿಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಶ್ರೀ ಕಡಂಬಳಿತ್ತಯ ದೈವ, ಪುರುಷ ದೈವ ಹಾಗೂ ಇತರ ಸಪರಿವಾರ ದೈವಗಳ ಪ್ರಧಾನ ಆಡಳಿತದಾರ ರಾಜೇಂದ್ರ ಹೆಗ್ಡೆ ಕಡಬ ಗುತ್ತು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ನಾಯಕ್, ಖಜಾಂಜಿ ರಮೇಶ್ ರಾವ್ ಹೊಸಮನೆ, ಪ್ರಮುಖರಾದ ಪೂವಪ್ಪ ಗೌಡ, ವೆಂಕಪ್ಪ ಗೌಡ, ರಮೇಶ್ ಗೌಡ, ಲಕ್ಷ್ಮೀಶ ಗೌಡ ಆರಿಗ ಸೇರಿದಂತೆ ಜಾತ್ರೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here