ಅಂದದ ನಾರಿಯ ಚೆಂದದ ಪಾದಗಳಿಗೆ ‘ಕಾಲುಂಗುರ’ವೆ ಶೃಂಗಾರ – ಸಂಪ್ರದಾಯದ ಜೊತೆ ಫ್ಯಾಷನ್- ಈಗೇನಿದ್ರೂ ಟ್ರೆಂಡಿ ಕಾಲ

0

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ.. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಈಗ ಕಾಲ ಬದಲಾಗಿದೆ. ಸಂಪ್ರದಾಯ ಜೊತೆಗೆ ಆಧುನಿಕತೆಯ ಟಚ್ ಇದ್ದರೆ ಸ್ವಲ್ಪ ಟ್ರೆಂಡಿ ಲುಕ್ ಕಾಣಲಿದೆ ಅನ್ನೋದು ನಾರಿಮಣಿಯರ ಭಾವನೆ..

ಸಂಪ್ರದಾಯದ ಜೊತೆ ಫ್ಯಾಷನಬಲ್ ಆಗಿಯೂ ಕಾಲುಂಗುರ ಧರಿಸಬಹುದಾಗಿದೆ. ಚೆಂದದ ಕಾಲುಂಗುರ ಧರಿಸುವ ಮೂಲಕ ಸಂಪ್ರದಾಯದಕ್ಕೂ ಜೈ, ಟ್ರೆಂಡಿ ಫ್ಯಾಷನ್ ಲುಕ್ ಗೂ ಸೈ ಅನಿಸಿಕೊಳ್ಳುತ್ತಿದ್ದಾರೆ ಈಗಿನ ಮಹಿಳೆಯರು.

ನವಿಲು ವಿನ್ಯಾಸದ ಕಾಲುಂಗುರ
ಇದೀಗ ನವಿಲಿನ ವಿನ್ಯಾಸದ ಕಾಲುಂಗುರದ ಜಮಾನ. ನವಿಲು ವಿನ್ಯಾಸದ ಕಾಲುಂಗುರದ ಟ್ರೆಂಡ್ ಶುರುವಾಗಿದೆ. ಮಹಿಳೆಯರ ಕಾಲಿನ ಅಂದ ಹೆಚ್ಚಿಸುವುದರ ಜೊತೆ ಟ್ರೆಂಡಿ ಲುಕ್ ಅನ್ನು ನೀಡಲಿದೆ.

ಗುಲಾಬಿ ವಿನ್ಯಾಸದ ಕಾಲುಂಗುರ
ಗುಲಾಬಿ ಬಣ್ಣವಾಗಲಿ, ಹೂವಾಗಲಿ ಮಹಿಳೆಯರಿಗೆ ಪ್ರಿಯವಾದದ್ದು. ಅದರಂತೆ ಗುಲಾಬಿ ವಿನ್ಯಾಸದ ಕಾಲುಂಗುರಕ್ಕೂ ಬೇಡಿಕೆ ಹೆಚ್ಚಾಗಿದೆ. ಸೀರೆ ಅಥವಾ ಲೆಹೆಂಗಾಗೆ ಇದು ಧರಿಸಲು ಸೂಕ್ತವಾಗಿದೆ. ಮದುವೆಯಲ್ಲಿ ವಧುವಿಗೂ ಇದನ್ನು ಉಡುಗೊರೆಯಾಗಿ ನೀಡಬಹುದು.

ಹೂವು, ಎಲೆ ಕಾಲುಂಗುರದ ಡಿಸೈನ್:
ಈ ಕಾಲುಂಗುರ ಸದ್ಯ ಟ್ರೆಂಡ್‌ನಲ್ಲಿದೆ. ಸಂಪ್ರದಾಯಿಕ ಲುಕ್ ಜೊತೆ ಫ್ಯಾಷನಬಲ್ ಆಗಿ ಕಾಣಿಸುತ್ತದೆ. ಅದರಲ್ಲೂ ನಾರಿಮಣಿಯರ ಕಾಲಿನ ಬೆರಳಿನ ಅಂದ ಹೆಚ್ಚಿಸುತ್ತದೆ.

ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರ:
ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರವು ಎಲ್ಲಾ ಬಗೆಯ ಬಟ್ಟೆಗೂ ಒಪ್ಪುತ್ತದೆ. ಸೀರೆ, ಚೂಡಿದಾರ್ ಎಲ್ಲದ್ದಕ್ಕೂ ಸರಿಹೊಂದುವಂತಹ ಕಾಲುಂಗುರವಾಗಿದೆ. ಈಗೀನ ಕಾಲಕ್ಕೂ ಇದು ಟ್ರೆಂಡಿಯಾಗಿದೆ.

ಬಣ್ಣದ ಹರಳಿನ ಕಾಲುಂಗುರ:
ಬಣ್ಣ ಬಣ್ಣದ ಉದ್ದನೆಯ ಕಾಲುಂಗುರದಿಂದ ಕಾಲಿನ ಸೌಂದರ್ಯ ಹೆಚ್ಚಿಸುತ್ತದೆ. ಇದು ಸದ್ಯ ಟ್ರೆಂಡ್‌ನಲ್ಲಿದೆ.

ಬಿಳಿ ಮುತ್ತುಗಳ ಕಾಲುಂಗುರ:
ಬೆಳ್ಳಿ ಬಿಳಿ ಮುತ್ತುಗಳ ಡಿಸೈನ್‌ಗೆ ನಾರಿಮಣಿಯರು ಫಿದಾ ಆಗಿದ್ದಾರೆ. ನೋಡಲು ಸ್ಟೈಲೀಶ್ ಆಗಿ ಹೈಲೆಟ್ ಆಗಿ ಕಾಣುತ್ತದೆ. ಎಲ್ಲಾ ಬಗೆಯ ಬಟ್ಟೆಗಳಿಗೂ ಇದು ಹೊಂದಾಣಿಕೆಯಾಗುತ್ತದೆ.

ಕಾಲ ಎಷ್ಟೇ ಬದಲಾದರೂ ಸಂಪ್ರದಾಯಕ್ಕಿರುವ ಗತ್ತು ಬೇರೆಯೇ.. ಬದಲಾವಣೆ ಜಗದ ನಿಯಮ ಆದರೆ ನಮ್ಮ ಸಂಪ್ರದಾಯವನ್ನು ಯಾವತ್ತೂ ಮರೆಯುವಂತಾಗಬಾರದು.. ಟ್ರೆಂಡಿ ಫ್ಯಾಷನ್ ಲುಕ್ ಎಷ್ಟೇ ಬಂದರೂ ನಮ್ಮ ಹಳೆಯ ಸಂಪ್ರದಾಯದ ಕಾಲುಂಗುರಕ್ಕಿರುವ ಗತ್ತು ಬೇರೆಯೇ ಅಲ್ವಾ..!?

LEAVE A REPLY

Please enter your comment!
Please enter your name here