ಪುತ್ತೂರು: ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ಒಂದಾದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಭೇಟಿ ನೀಡಿ ರಂಗಪೂಜೆ ಸಲ್ಲಿಸಿದರು.

ಶಾಸಕರನ್ನು ವ್ಯವಸ್ಥಾಪನ ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ, ಸಮಿತಿಯ ಸದಸ್ಯರಾದ ಪ್ರಶಾಂತ್ ಮಚ್ಚಿನ, ವಿಶ್ವನಾಥ್ ಪೂಜಾರಿ ಕೊಲ್ಲಾಜೆ, ಪ್ರಮೋದ್ ಕುಮಾರ್ ರೈ, ಹರಿಶ್ಚಂದ್ರ ಕೊಕ್ಕಡ,ಗಣೇಶ್ ಕಾಶಿ ಕೊಕ್ಕಡ, ಉಪಸ್ಥಿತರಿದ್ದರು.