ಅಧ್ಯಕ್ಷ : ಭರತ್ ಓಲ್ತಾಜೆ, ಕಾರ್ಯದರ್ಶಿ ಗೀತಾ ಬಳ್ಳಿಕಾನ, ಕೋಶಾಧಿಕಾರಿ: ಚಂದ್ರಶೇಖರ್, ಉಪಾಧ್ಯಕ್ಷ :ರಮೇಶ್

ಪುತ್ತೂರು: ಅರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆಯು ಗ್ರಾಮ ಸಮಿತಿಯ ಅಧ್ಯಕ್ಷರಾದ ಭರತ್ ಪೂಜಾರಿ ಓಲ್ತಾಜೆಯವರು ಸಭಾ ಅಧ್ಯಕ್ಷತೆಯಲ್ಲಿ ಜೂ.8 ರಂದು ಮಜ್ಜಾರಡ್ಕ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಬಿಲ್ಲವ ಸಂಘದ ಕಾರ್ಯದಶಿ ಚಿದಾನಂದ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಯವವಾಹಿನಿ ಅಧ್ಯಕ್ಷರು ಅಣ್ಣಿ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್, ಮುಖ್ಯಕಾರ್ಯನಿರ್ವಾಹನಾಧಿಕಾರಿ ಉದಯ ಕೋಲಾಡಿ, ಅರಿಯಡ್ಕ ಮಹಿಳಾ ವೇದಿಕೆ ಅಧ್ಯಕ್ಷೆ ಶಮ್ಮಿಲತಾ ಪುರುಷೋತ್ತಮ ಗೋಳ್ತಿಲ, ಸುರೇಶ್ ಕುಮಾರ್ ಸುಶಾ ಕುಂಬ್ರ, ಕೋಚಣ್ಣ ಪೂಜಾರಿ ಎಂಡೆಸಾಗು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ ಭರತ್ ಪೂಜಾರಿ ಓಲ್ತಾಜೆ, ಉಪಾಧ್ಯಕ್ಷರಾಗಿ ರಮೇಶ ದರ್ಬೆತ್ತಡ್ಕ, ಕಾರ್ಯದರ್ಶಿಯಾಗಿ ಗೀತಾ ಬಳ್ಳಿಕಾನ, ಜಂಟಿ ಕಾರ್ಯದರ್ಶಿಯಾಗಿ ಉಮೇಶ ಯು.ಎಸ್. ಶೇಕಮಲೆ, ಖಜಾಂಚಿಯಾಗಿ ಚಂದ್ರಶೇಖರ್ ಕುತ್ಯಾಡಿರವರುಗಳನ್ನು ಆಯ್ಕೆ ಮಾಡಲಾಯಿತು. ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶೇಷಮ್ಮ ಗುಂಡ್ಯಡ್ಕ, ಉಪಾಧ್ಯಕ್ಷೆಯಾಗಿ ಯಶೋದಾ ಮಜ್ಜರ್, ಕಾರ್ಯದರ್ಶಿಯಾಗಿ ಹರಿಣಾಕ್ಷಿ ಸ್ವಾಮಿನಗರ, ಜಂಟಿ ಕಾರ್ಯದರ್ಶಿಯಾಗಿ ಶಮ್ಮಿಲತಾ, ಖಜಾಂಚಿಯಾಗಿ ರಮ್ಯಾ ಮಜ್ಜಾರ್ರವರುಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾಗಿದ್ದಾರೆ.ಯಶೋದಾ ಮಜ್ಜಾರ್ ವರಧಿ ವಾಚಿಸಿದರು. ರಮೇಶ್ ದರ್ಬೆತ್ತಡ್ಕ ಸ್ವಾಗತಿಸಿದರು. ವಿಖ್ಯಾತ್ ಮಜ್ಜಾರ್ ಪ್ರಾರ್ಥಿಸಿದರು.