ಪುತ್ತೂರು: ಬೆಟ್ಟಂಪಾಡಿ ನವೋದಯ ಫ್ರೌಢಶಾಲೆಯ 2025-26ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ರಚನೆ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲಾನಾಯಕನಾಗಿ 10ನೇ ತರಗತಿಯ ಅಶ್ವಿತ್ ಬಿ., ಉಪನಾಯಕನಾಗಿ 9ನೇ ತರಗತಿಯ ಯತನ್, ಆಯ್ಕೆಯಾಗಿದ್ದಾರೆ. ಕ್ರೀಡಾಮಂತ್ರಿ ತರುಣ್, ಉಪಕ್ರೀಡಾಮಂತ್ರಿ ಅಬ್ದುಲ್ ರಹೀಂ, ವಿದ್ಯಾಮಂತ್ರಿ ಧನ್ಯಶ್ರೀ, ಉಪವಿದ್ಯಾಮಂತ್ರಿ ಮಧುಶ್ರೀ, ರಕ್ಷಣಾಮಂತ್ರಿ ರಾಕೇಶ್, ಉಪರಕ್ಷಣಾ ಮಂತ್ರಿ ಹರ್ಷದೀಪ್, ಸ್ತ್ರೀಹಿತ ರಕ್ಷಣಾ ಮಂತ್ರಿ ವಿಭಾಶ್ರೀ, ಉಪ ಸ್ತ್ರೀಹಿತ ರಕ್ಷಣಾ ಮಂತ್ರಿ ಸಾಕ್ಷ್ಯಾ, ನೀರಾವರಿ ಮಂತ್ರಿ ದಿಂಗತ್, ಉಪ ನೀರಾವರಿಮಂತ್ರಿ ಕಾರ್ತಿಕ್, ಕೃಷಿಮಂತ್ರಿ ರವಿತೇಜ ಬಿ., ಉಪ ಕೃಷಿಮಂತ್ರಿ ರೋಹನ್, ಆರೋಗ್ಯಮಂತ್ರಿ ಆಯಿಷತ್ ಹಿಬಾ, ಉಪ ಆರೋಗ್ಯಮಂತ್ರಿ ಫಾತಿಮತ್ ಶಾನಿಬಾ, ಸಂಸತ್ ಕಾರ್ಯದರ್ಶಿ ಫಾತಿಮತ್ ತುಫೈಲಾ ಕೆ., ಉಪಸಂಸತ್ ಕಾರ್ಯದರ್ಶಿ ಆಯಿಷತ್ ಶಮ್ನಾ, ಸಭಾಪತಿ ಧನ್ವಿ, ಉಪಸಭಾಪತಿ ಶ್ರೀಜಾ, ಸ್ವಚ್ಚತಾ ಮಂತ್ರಿ ತರಣ್, ಉಪಸ್ವಚ್ಚತಾ ಮಂತ್ರಿ ತೃಪ್ತಿ, ಸಾಂಸ್ಕೃತಿಕ ಮಂತ್ರಿ ಫಾತಿಮ ಸಹ್ಲ, ಉಪ ಸಾಂಸ್ಕೃತಿಕ ಮಂತ್ರಿ ಫಾತಿಮತ್ ಶನಾ ಬಿ., ವಿರೋಧ ಪಕ್ಷದ ನಾಯಕಿ ತೃಶಾ, ಉಪ ವಿರೋಧ ಪಕ್ಷದ ನಾಯಕಿ ಕೃತಿಕಾ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಪುಷ್ಪಾವತಿ ಎಸ್.ರವರು ಪ್ರಮಾಣವಚನ ಶಾಲಾ ಸಂಸತ್‌ನ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಕಿವಿಮಾತು ಹೇಳಿ ಶುಭಹಾರೈಸಿದರು. ಇಂಗ್ಲೀಷ್ ಅಧ್ಯಾಪಕ ರಾಧಾಕೃಷ್ಣ ಆರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪಿ., ಸಹಶಿಕ್ಷಕಿ ಸುಮಂಗಲಾ .ಕೆ ಶುಭಹಾರೈಸಿದರು. ಸಹ ಶಿಕ್ಷಕಿಯರಾದ ಶೋಭಾ ಬಿ., ಭುವನೇಶ್ವರಿ ಎಂ., ಗೌತಮಿ ಎಂ.ಬಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತೃಶಾ , ಫಾತಿಮತ್ ತುಫೈಲಾ ಕೆ, ಫಾತಿಮತ್ ಶನಾ ಬಿ. ಕಾರ್ಯಕ್ರಮ ನಡೆಸಿಕೊಟ್ಟರು.