ಉಪ್ಪಿನಂಗಡಿ: ಗಣೇಶೋತ್ಸವ ಹಿನ್ನಲೆ ಶಾಂತಿ ಸಭೆ

0

ಉಪ್ಪಿನಂಗಡಿ: ಮುಂಬರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಯಮಾವಳಿಗಳ ಪಾಲನೆಯೊಂದಿಗೆ ಇಲಾಖೆಯ ಜೊತೆ ಸಹಕರಿಸಬೇಕೆಂದು ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ತಿಳಿಸಿದರು.


ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿಜೆ ಬಳಕೆಗೆ ಸರಕಾರ ಸಂಪೂರ್ಣ ನಿಷೇಧ ವಿಧಿಸಿದ್ದು, ಯಾವ ಕಾರಣಕ್ಕೂ ಡಿಜೆಯನ್ನು ಮೆರವಣಿಗೆಯಲ್ಲಿ ಅಳವಡಿಸಬಾರದು. ಸಮಯಾವಕಾಶದೊಳಗೆ ಕಾರ್ಯಕ್ರಮವನ್ನು ಮುಗಿಸಲು ಯತ್ನಿಸಬೇಕೆಂದು ತಿಳಿಸಿದರು. ಟ್ಯಾಬ್ಲೋ ಗಳ ಬಗ್ಗೆ ಪೊಲೀಸ್ ಇಲಾಖಾನುಮತಿಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 17 ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here