ಸಮರ್ಥ ಜನಸೇವಾ ಟ್ರಸ್ಟ್‌‌ ವತಿಯಿಂದ ಪುಣ್ಚಪ್ಪಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕರಿಸಿದವರಿಗೆ ಅಭಿನಂದನಾ ಸಮಾರಂಭ

0

ಪುತ್ತೂರು: ಸಮರ್ಥ ಜನಸೇವಾ ಟ್ರಸ್ಟ್‌ ಪುಣ್ಚಪ್ಪಾಡಿ ವತಿಯಿಂದ ಪುಣ್ಚಪ್ಪಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕರಿಸಿದ ವಿವಿಧ ಇಲಾಖೆಯವರಿಗೆ ಆ.26ರಂದು ಪುಣ್ಚಪ್ಪಾಡಿ ಗೌರಿ ಸದನದಲ್ಲಿ ಅಭಿನಂದನೆ ನಡೆಸಲಾಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಸಮರ್ಥ ಜನಸೇವಾ ಟ್ರಸ್ಟ್‌ ನ ಅಧ್ಯಕ್ಷರಾದ ಗಿರಿಶಂಕರ ಸುಲಾಯ ಮಾತನಾಡಿ ಪುಣ್ಚಪ್ಪಾಡಿ ಗ್ರಾಮದ ಅಭಿವೃದ್ಧಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳಿಗೆ ವಿವಿಧ ಇಲಾಖೆಯವರನ್ನು ಸಮರ್ಥ ಜನಸೇವಾ ಟ್ರಸ್ಟ್‌ ವತಿಯಿಂದ ಅಭಿನಂದಿಸುವುದೆಂದು ಟ್ರಸ್ಟ್‌ನ ಸಭೆಯಲ್ಲಿ ತೀರ್ಮಾನಗೊಂಡಂತೆ ಈ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿರುತ್ತೇವೆ. ಪ್ರಸ್ತುತ ಇನ್ನಷ್ಟು ಅವರಲ್ಲಿ ಸಾಮಾಜಿಕ ಕಳಕಳಿ ಮೂಡಬೇಕೆಂಬ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದರು.


ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸವಣೂರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕ, ವೈದ್ಯಾಧಿಕಾರಿ ಮತ್ತು ಆಶಾಕಾರ್ಯಕರ್ತೆ, ಮೆಸ್ಕಾಂ ಶಾಖಾಧಿಕಾರಿ ಮತ್ತು ಸಿಬ್ಬಂದಿ, ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ, ಕೆನರಾ ಬ್ಯಾಂಕ್‌ ಶಾಖಾಧಿಕಾರಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ, ಪ್ರಾಂಶುಪಾಲರು ಮತ್ತು ಪ್ರೌಢಶಾಲೆ ಮುಖ್ಯಗುರುಗಳು, ಪ್ರಾಥಮಿಕ ಶಾಲಾ ಮುಖ್ಯಗುರುಗಳು, ಪತ್ರಕರ್ತರು, ಸಹಕಾರಿ ಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಹಾಲು ಉತ್ಪಾದಕ ಸಹಕಾರಿ ಸಂಘದ ಉಪಾಧ್ಯಕ್ಷರಿಗೆ, ಶ್ರೀ ಕ್ಷೇ,ಧ,ಗ್ರಾ. ಯೋಜನೆಯ ಸೇವಾಪ್ರತಿನಿಧಿ, ಒಡಿಯೂರು ಕ್ಷೇತ್ರ ಯೋಜನೆಯ ಮೇಲ್ವಿಚಾರಕರಿಗೆ ಸೇರಿ ಸುಮಾರು 89 ಮುಖ್ಯಸ್ಥರು, ಸಿಬ್ಬಂದಿಗಳಿಗೆ ಅಭಿನಂಧಿಸಲಾಯಿತು.

ಸಭೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್‌ ಕೆ ಸವಣೂರು, ಜೊತೆ ಕಾರ್ಯದರ್ಶಿ ನಾಗರಾಜ ನಿಡ್ವಣ್ಣಾಯ, ಕೋಶಾಧಿಕಾರಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಟ್ರಸ್ಟ್‌ಗಳಾದ ನಾಗೇಶ್‌ ಓಡಂತರ್ಯ, ರಾಜೇಶ್ವರಿ ಕನ್ಯಾಮಂಗಲ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಯಶೋಧ ನೂಜಾಜೆ ವೇದಿಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್‌ ಕೆ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here