ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಮಹಾಲಿಂಗೇಶ್ವರ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟ ಮುಂಡೂರು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.28ರಂದು ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಭಾ ಭವನದಲ್ಲಿ ನಡೆಯಿತು.

ಒಕ್ಕೂಟದ ಸದಸ್ಯೆ ವೀಣಾ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಲೆಕ್ಕ ಪರಿಶೋಧನೆ(ಖರ್ಚು-ವೆಚ್ಚ) ಮಂಡಿಸಿದರು. ಎಂಬಿಕೆ ಮೋಕ್ಷಿತಾ 2025-26ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ಮಂಡಿಸಿದರು.
ಪಂಚಾಯತ್ ಅಧ್ಯಕ್ಷರು ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟ ಮಾದರಿ ಒಕ್ಕೂಟವಾಗಿ ಬೆಳೆಯಬೇಕೆಂದರು. ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ತಾಲೂಕು ಸಂಪನ್ಮೂಲ ವ್ಯಕ್ತಿ ವಿದ್ಯಾ ಮಾದಕ ಮುಕ್ತ ಸಮಾಜವಾಗಲು ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

ವಲಯ ಮೇಲ್ವಿಚಾರಕಿ ನಳಿನಾಕ್ಷಿ ಎನ್‌ಆರ್‌ಎಲ್‌ಎಮ್ ಬಗ್ಗೆ ಮಾಹಿತಿ ನೀಡಿದರು. ಘನತ್ಯಾಜ್ಯ ಘಟಕದ ಸಿಬ್ಬಂದಿ ವಾರಿಜ ಮತ್ತು ಸುಶೀಲರವರನ್ನು ಸನ್ಮಾನಿಸಲಾತು. ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಹೆಚ್‌ಓ ಸುಚೇತಾ ಹಾಗೂ ಸಿಬ್ಬಂದಿಯವರು ಸಂಘದ ಸದಸ್ಯರ ಬಿಪಿ, ಶುಗರ್ ಟೆಸ್ಟ್ ಮಾಡಿದರು.
ಪದಾಧಿಕಾರಿಗಳ ಆಯ್ಕೆ
ಈ ಕಾರ್ಯಕ್ರಮದಲ್ಲಿ 2025-26 ರ ವಾರ್ಷಿಕ ಅವಧಿಯಲ್ಲಿ ವಾರ್ಡ್ ಮಟ್ಟದ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವನಿತಾ ಗೆ ಷಣ್ಮುಖ ಸ್ತ್ರೀ ಶಕ್ತಿ, ಉಪಧ್ಯಕ್ಷರಾಗಿ ಮೀನಾಕ್ಷಿ ಗೆ ಸರಸ್ವತಿ ಸ್ತ್ರೀ ಶಕ್ತಿ, ಕಾರ್ಯದರ್ಶಿಯಾಗಿ ಚೈತ್ರಾ ಮಧುಚಂದ್ರ ಎಲಿಯ – ಶ್ರೀ ದುರ್ಗಾ ಸ್ತ್ರೀ ಶಕ್ತಿ, ಜೊತೆ ಕಾರ್ಯದರ್ಶಿಯಾಗಿ ಲೀಲಾವತಿ – ಪ್ರೀತಿ ಸ್ತ್ರೀ ಶಕ್ತಿ, ಕೋಶಾಧಿಕಾರಿಯಾಗಿ ಗಿರಿಜಾ – ಅಕ್ಷಯ ಸಂಜೀವಿನಿ, ಹಾಗೂ ಉಪಸಮಿತಿಗೆ ಸವಿತಾ, ರಮ್ಯಶ್ರೀ, ಪಲ್ಲವಿ, ಮಹಾಲಕ್ಷ್ಮಿ, ಆರತಿ, ಸರಸ್ವತಿ, ಲೀಲಾವತಿ, ಮೈಮುನ ಆಯ್ಕೆಯಾದರು.

ಒಕ್ಕೂಟದ ಸಿಬ್ಬಂದಿಗಳಾದ ಎಲ್‌ಸಿಆರ್‌ಪಿ ಭವಾನಿ ಮತ್ತು ಕೃಷಿ ಸಖಿ ಪವಿತ್ರ ಸಂಜೀವಿನಿ ಒಕ್ಕೂಟ ಗೀತೆಯನ್ನು ಹಾಡಿದರು. ಒಕ್ಕೂಟದ ಅಧ್ಯಕ್ಷೆ ಸಂಗೀತಾ ಸ್ವಾಗತಿಸಿದರು. ಒಕ್ಕೂಟದ ಕೃಷಿ ಸಖಿ ಪವಿತ್ರ ವಂದಿಸಿದರು. ಒಕ್ಕೂಟದ ಪಶು ಸಖಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು, ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಸಿಬ್ಬಂದಿಗಳು ಹಾಜರಿದ್ದರು.