ಆತೂರು :ಮುಹಿಯುದ್ದೀನ್ ಜುಮಾ ಮಸೀದಿ ಆತೂರು ಕೊಯಿಲ ಇದರ ಅಧಿನದಲ್ಲಿರುವ ತನ್ವಿರುಲ್ ಇಸ್ಲಾಂ ಮದರಸ ವಿದ್ಯಾರ್ಥಿ ಸಂಘಟನೆಯಾದ SKSBV ಖಿದ್ ಮ ವತಿಯಿಂದ ಪ್ರವಾದಿ ನೆಬಿ (ಸ. ಅ) ರವರ 1500ನೇ ಜನ್ಮ ದಿನದ ಪ್ರಯುಕ್ತ ಆತೂರು ಪೇಟೆಯಿಂದ ಮುಹಿಯುದ್ದೀನ್ ಜುಮಾ ಮಸೀದಿ ಆತೂರು ಕೊಯಿಲ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಆ.31ರಂದು ನಡೆಸಲಾಯಿತು.

ಸ್ವಚ್ಛತೆ ಕಾರ್ಯಕ್ರಮದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಉಸ್ತಾದರಾದ ಆಸೀಫ್ ಅಝ್ಹರಿ, ಜಂಶೀರ್ ಫೈಝಿ,ಜಫರ್ ಅನ್ಸಾರಿ ಇವರ ಮಾರ್ಗನಿರ್ದೇಶನದಲ್ಲಿ ಮಸೀದಿ ಅಧ್ಯಕ್ಷರಾದ ಹೈದರ್ ಕಳಾಹಿ, ಜೊತೆ ಕಾರ್ಯದರ್ಶಿ ನಾಸೀರ್, ಕೋಶಾಧಿಕಾರಿ ಅಬ್ದುಲ್ ಖಾದರ್, ಅಶ್ರಫ್ ಮಾರ್ಜಲ್, ಅಬ್ದುಲ್ ಕರೀಂ ಹೇಂತಾರ್,ಎಸ್.ಎ.ಮುಹಮ್ಮದ್ ಉಸ್ಮಾನ್ ಆಟೋ,ಝೈನ್ ಆತೂರು ಹಾಗೂ ತನ್ವಿರುಲ್ ಇಸ್ಲಾಂ ಮದರಸದ SKSBV ಖಿದ್ ಮದ 30 ಪದಾಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಬಾಗಿಯಾಗಿದ್ದರು.