ಪುತ್ತೂರು: ಪುತ್ತೂರಿನ ಬಪ್ಪಳಿಗೆಯಲ್ಲಿ ಮುಸ್ಲಿಂ ಸಮುದಾಯದವರು ಈದ್ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿದರು.

ಮೊದಲಿಗೆ ಬಪ್ಪಳಿಗೆ ಮಸೀದಿಯಿಂದ ರ್ಯಾಲಿ ಹೊರಟು ದಾರಿಯುದ್ಧಕ್ಕೂ ಘೋಷಣೆ, ದಫ್ ನ ಮೂಲಕ ಮೆರುಗು ನೀಡಿತು. ಬಪ್ಪಳಿಗೆಯ ಈದ್ ಮಿಲಾದ್ ಸೌಹಾರ್ದತೆಗೆ ಸಾಕ್ಷಿಯಾಯಿತು.
ರಸ್ತೆಯುದ್ಧಕ್ಕೂ ಮಿಲಾದ್ ರ್ಯಾಲಿ ನಡೆಯುತ್ತಿದ್ದ ಸಂದರ್ಭ ಟೀಂ ಶಿವಾಮೃತ ತಂಡದ ಹಿಂದೂ ಸಮುದಾಯದವರು ಮುಸ್ಲಿಂ ಸಹೋದರರಿಗೆ ಸಿಹಿ ತಿಂಡಿ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.