ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಟ್ಟ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ವಿಜ್ಞಾನ ನಾಟಕ ’ನೆರಳು’ ಪ್ರಥಮ ಬಹುಮಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲೆಯ ಚಿತ್ರಕಲಾ ಶಿಕ್ಷಕ ಸದಾಶಿವ ಭಟ್ ಮತ್ತು ವಿಜ್ಞಾನ ಶಿಕ್ಷಕಿ ಪೂಜಾ ರಚಿಸಿ ನಿರ್ದೇಶಿಸಿದ ಈ ನಾಟಕದಲ್ಲಿ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಮಾನ್ವಿ ವಿಶ್ವನಾಥ್, ಧ್ರುತಿ ವಿ ಶೆಟ್ಟಿ, ಇಂಪನಾ ಸಿ ಭಟ್, ಎ ಟಿ ಮಾಧುರ್ಯ, ಸೃಷ್ಟಿ ಎನ್.ವಿ, ದರ್ಶಿಕಾ ನಾಯ್ಕ್, ಆಶ್ರಿತ್ ಕೃಷ್ಣ ರಾವ್ ಡಿ, ಮತ್ತು ರಿಷಭ್ ರಾಮ್ ಭಾಗವಹಿಸಿದ್ದರು. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಈ ನಾಟಕವು ಶಾಲೆಯ ವಿಜ್ಞಾನ ಸಂಘ ’ಅವನಿ’ಯ ಸಹಯೋಗದಲ್ಲಿ ನಿರ್ಮಾಣವಾಗಿದೆ.