ನರೇಂದ್ರ ಪ.ಪೂ ಕಾಲೇಜಿನಲ್ಲಿ ಸ್ವಯಂ ರಕ್ಷಣೆ ಕಲೆಗಳ ಮಾಹಿತಿ ಕಾರ‍್ಯಕ್ರಮ

0

ಪುತ್ತೂರು: ಸ್ವಯಂ ರಕ್ಷಣಾ ಕಲೆಗಳು ದೈಹಿಕ ಸಾಮರ್ಥ್ಯ , ಮಾನಸಿಕ ಸ್ಥೈರ್ಯ ಮತ್ತು ಪರಿಸರ ಪ್ರಜ್ಞೆಯನ್ನು ಹೆಚ್ಚಿಸುವ ಮೂಲಕ ವ್ಯಕ್ತಿಯನ್ನು ಸಂಭಾವ್ಯ ಅಪಾಯದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುವ ತಂತ್ರಗಳಾಗಿವೆ.ಪ್ರಸ್ತುತ ಕಾಲದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳು ಸ್ವಯಂ ರಕ್ಷಣಾ ಕಲೆಗಳನ್ನು ಅಭ್ಯಾಸ ಮಾಡಿದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬಹುದು. ಎಂದು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಕಟೀಲು ಇದರ ಸಂಸ್ಥಾಪಕರಾದ ಕಾರ್ತಿಕ್ ಎಸ್ ಕಟೀಲು ಹೇಳಿದರು.


ಇನ್ನರ್ ವೀಲ್ ಕ್ಲಬ್ ಪುತ್ತೂರು ಮತ್ತು ನರೇಂದ್ರ ಪ.ಪೂ. ಕಾಲೇಜು ತೆಂಕಿಲ ಇದರ ಜಂಟಿ ಆಶ್ರಯದಲ್ಲಿ ನಡೆದ ಸ್ವಯಂ ರಕ್ಷಣೆ ಕಲೆಗಳ ಮಾಹಿತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಾಗ ಅದನ್ನು ಎದುರಿಸುವ ಬಗ್ಗೆ ಮತ್ತು ಆತ್ಮಸ್ಥೈರ್ಯದ ಮೂಲಕ ಪಾರಾಗುವ ಸೂತ್ರಗಳನ್ನು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ, ಸೈಬರ್ ವಂಚನೆಗಳಿಂದ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿದರು.ಸೈಬರ್ ಕ್ರೈಮ್ ನಿರಂತರವಾಗಿ ಬೆಳೆಯುತ್ತಿರುವುದರಿಂದ, ಜಾಗರೂಕರಾಗಿರುವುದು ಮತ್ತು ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಿರುವುದು ಅತ್ಯಗತ್ಯ ಎಂದು ಹೇಳಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ರೂಪಲೇಖ ರವರು ಮಾತನಾಡುತ್ತ ಇಂದಿನ ಯುವಜನತೆ ಆತ್ಮವಿಶ್ವಾಸದಿಂದ ಆತ್ಮ ರಕ್ಷಣೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಸ್ವಯಂ ರಕ್ಷಣೆಯ ತಂತ್ರಗಳನ್ನು ಕಲಿತರೆ ಆತ್ಮವಿಶ್ವಾಸ ಹೆಚ್ಚುತ್ತದೆ . ಆಪತ್ತಿನ ಕಾಲದಲ್ಲಿ ಇದು ಸಹಾಯವಾಗುತ್ತದೆ. ಎಂದು ಹೇಳಿದರು.ಕಾರ್ತಿಕ್ ಎಸ್, ಕಟೀಲು, ಶೋಭಲತಾ ರವರು ಸ್ವಯಂ ರಕ್ಷಣೆ ಕಲೆಗಳ ಪ್ರಾತ್ಯಕ್ಷಿಕೆ ನೀಡಿದರು.
ವೇದಿಕೆಯಲ್ಲಿ ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಕಾರ‍್ಯದರ್ಶಿಗಳಾದ ಸಂಧ್ಯಾ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಲೋಚನಾ ವಂದಿಸಿದರು.

LEAVE A REPLY

Please enter your comment!
Please enter your name here