ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಕೇಂದ್ರ ಮತ್ತು ಕಲಿಕಾ ಹಬ್ಬದ ಉದ್ಘಾಟನ ಸಮಾರಂಭ

0

ಶಾಲೆಯು ಕಲಿಕಾ ಕೇಂದ್ರವಾಗಬೇಕು, ಕಲಿಕೆಯಲ್ಲಿ ಎಲ್ಲರನ್ನು ತೊಡಗಿಸಿಕೊಳ್ಳಬೇಕು – ಭಾಗೀರಥಿ ಮುರುಳ್ಯ

ಸವಣೂರು: ಶಾಲೆಯು ಕಲಿಕಾ ಕೇಂದ್ರವಾಗಬೇಕು. ಕಲಿಕೆಯಲ್ಲಿ ಎಲ್ಲರನ್ನೂ ಕೂಡ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಲಿಕಾ ಹಬ್ಬವನ್ನು ಆಚರಿಸುವುದರ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿ ಬರಲು ಸಾಧ್ಯವಿದೆ. ಇವತ್ತಿನ ದಿನಗಳಲ್ಲಿ ನಾವೆಲ್ಲಾ ಒತ್ತಡದ ಬದುಕು ನಡೆಸುವುದರಿಂದ ಮಕ್ಕಳಿಂದ ಹಿರಿಯರಿಗೂ ಯೋಗ ಕೇಂದ್ರದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಯೋಗ ನಡೆಸುವ ಆಸಕ್ತಿಯನ್ನು ಬೆಳೆಸಿಕೊಂಡಾಗ ಮಕ್ಕಳಲ್ಲಿ ಆರೋಗ್ಯದ ಜೊತೆಗೆ ಪ್ರತಿಭಾವಂತರಾಗಿ ಮೂಡಿ ಬರಲು ಸಾಧ್ಯವಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ನುಡಿದರು.

ಅವರು ಸವಣೂರು ಗ್ರಾಮ ಪಂಚಾಯತ್‌ ನ ಅನುದಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ನಿರ್ಮಾಣವಾದ ಯೋಗಕೇಂದ್ರವನ್ನು ಉದ್ಘಾಟಿಸಿ, ಹಾಗೂ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಶಿಕ್ಷಣ ಸಂಪನ್ಮೂಲ ಕೇಂದ್ರ ಸವಣೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮಾರಮಂಗಲ ಇದರ ಸಂಯುಕ್ತ ಆಶ್ರಯದಲ್ಲಿ ಸವಣೂರು ಕ್ಲಸ್ಟರ್‌ ಮಟ್ಟದ ಬುನಾದಿ ಸಾಕ್ಷರತೆ ಸಂಖ್ಯಾ ಜ್ಞಾನ ಕಲಿಕಾ ಹಬ್ಬ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸವಣೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಸುಂದರಿ ಬಿ ಎಸ್‌ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಗ್ರಾಮ ಅಭಿವೃದ್ದಿಗೂ ಪೂರಕವಾಗಲಿದೆ. ಆದುದರಿಂದ ಗ್ರಾಮದ ಮಕ್ಕಳು ಮತ್ತು ಪೋಷಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ವೇದಿಕೆಯಲ್ಲಿಸವಣೂರು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್‌ ವೈ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು, ಗ್ರಾಮ ಪಂಚಾಯತ್‌ ಸದಸ್ಯರಾದ ಗಿರಿಶಂಕರ್‌ ಸುಲಾಯ, ಯಶೋಧ ನೂಜಾಜೆ, ಭರತ್‌ ರೈ ಪಾಲ್ತಾಡಿ, ಚೇತನ ಪಾಲ್ತಾಡಿ,ಎಂ.ಎ. ರಫೀಕ್‌ ಮಾಂತೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್‌ ಕೆ ಸವಣೂರು, ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಹೇಮಲತಾ ಕುಮಾರಮಂಗಲ, ಉಪಾಧ್ಯಕ್ಷ ಗಂಗಾಧರ ಕನ್ಯಾಮಂಗಲ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚೇತನ್‌ ಕೋಡಿಬೈಲು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು, ಪಿಡ್ಲ್ಯೂಡಿ ಕಾಂಟ್ರಾಕ್ಟರ್ ಗಂಗಾಧರ ಪೆರಿಯಡ್ಕ‌, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇದರ ಮುಖ್ಯಗುರುಗಳಾದ ನಿಂಗರಾಜು ಕೆ ಪಿ, ಪಲ್ಲತ್ತಾರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಸೀತಾರಾಮ ಕೆ ಜಿ, ಬೆಳಂದೂರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಜಾನಕಿ ಕೆ ಆರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸೋಮೇಶ್‌, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರಾದ ಗಿರಿಶಂಕರ್‌ ಸುಲಾಯ, ಯಶೋಧ ನೂಜಾಜೆ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಂದರಿ ಬಿ ಎಸ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸೋಮೇಶ್‌, ಪಿಡ್ಲ್ಯೂಡಿ ಕಾಂಟ್ರಾಕ್ಟರ್ ಗಂಗಾಧರ ಪೆರಿಯಡ್ಕ‌, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಎಸ್‌ ಡಿ ಎಂ ಸಿ ಯ ಮಾಜಿ ಸದಸ್ಯರಾದ ರಮೇಶ್‌ ಕುಮಾರಮಂಗಲ, ವಿಶ್ವನಾಥ ಕುಮಾರಮಂಗಲ ರವರನ್ನು ಶಾಲಾ ವತಿಯಿಂದ ಶಾಸಕರು ಸನ್ಮಾನಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನಾಣಿಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುನಿಲ್‌, ದೋಲ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜಯರಾಜ್‌, ಇಡ್ಯಡ್ಕ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಛತ್ರಕುಮಾರ್‌, ಚಾರ್ವಾಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭಾ, ಕಾಣಿಯೂರು ಹಿರಿಯ ಪ್ರಾಥಮಿಕ ಶಿಕ್ಷಕಿ ಸರೋಜ ಪಿ ಕೆ, ನಾರ್ಯಬೈಲು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜಯುಸ್‌ ಹೇಮಲತಾ ಗಂಗೇರ, ಕೊಪ್ಪ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜ್ಯೋತಿ ದೇವರಮನೆ ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ಎಸ್‌ ಡಿ ಎಂ ಸಿ ಸದ್ಯಸರಾದ ಯಮುನಾ, ಜೀವಿತ್‌ ಕುಮಾರ್‌, ವೇದಾವತಿ, ಸುರೇಖ, ರೇಖಾ, ಸರಿತಾ, ಸ್ಮಿತಾ, ಜಯಂತಿ, ಮಮತಾ, ಶ್ಯಾಮಲ, ನಿಶಲತಾ, ತಾರಾಮಣಿ, ರಶ್ಮಿತಾ, ಮೋಹಿನಿ, ಸುನಂದ, ಲೀಲಾವತಿ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ರಮೇಶ, ವಿಶ್ವನಾಥ, ನಾಗೇಶ, ಯತಿನ್‌, ಪುಟ್ಟಣ್ಣ ಮಡಿವಾಳ, ಅಂಗನವಾಡಿ ಶಿಕ್ಷಕಿ ಜಾನಕಿ, ಅಡುಗೆ ಸಿಬ್ಬಂದಿ ಶೇಷಮ್ಮ, ಶ್ಯಾಮಲ, ಶಾಲಾ ಅತಿಥಿ ಶಿಕ್ಷಕರಾದ ಸುಪ್ರಿಯ ಸಹಕರಿಸಿದರು. ಶಾಲಾ ಮುಖ್ಯಗುರುಗಳಾದ ಸಂತೋಷ್‌ ಎನ್‌ ಟಿ ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಶ್ಯಾಮ್‌ ವಂದಿಸಿದರು. ಅತಿಥಿ ಶಿಕ್ಷಕರಾದ ರಾಜೇಶ್ವರಿ ಕನ್ಯಾಮಂಗಲ ನಿರೂಪಿಸಿದರು.

LEAVE A REPLY

Please enter your comment!
Please enter your name here