ಜ.3,4 : ನೆಹರೂನಗರ ಕಾಡು ಬಯಲು ರಂಗಮಂಟಪದಲ್ಲಿ ನಿನಾಸಂ ತಿರುಗಾಟದ ನಾಟಕಗಳು

0

ʼಹೃದಯದ ತೀರ್ಪುʼ, ʼಅವತರಣಮ್ ಭ್ರಾಂತಾಲಯಮ್ʼ

ಪುತ್ತೂರು : ನೆಹರೂನಗರ ಕಾಡು ಬಳಗದ ವತಿಯಿಂದ ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನ ಮುಂಭಾಗದ ಕಾಡು ಬಯಲು ರಂಗಮಂಟಪದಲ್ಲಿ ಜ.3,4 ರಂದು ರಾಜ್ಯದಾಂದ್ಯಂತ ಪ್ರಸಿದ್ದಿ ಪಡೆದ ನಿನಾಸಂ ತಿರುಗಾಟದ ಎರಡು ವಿಭಿನ್ನ ನಾಟಕಗಳು ನಡೆಯಲಿದೆ.

ಜ.3 ರಂದು ಶನಿವಾರ ಸಂಜೆ 7 ರಿಂದ ಡಾ. ಎಂ. ಗಣೇಶ್ ನಿರ್ದೇಶನದ ಭಾನು ಮುಸ್ತಾಕ್ ಕಥೆಯಾಧಾರಿತ ʼಹೃದಯದ ತೀರ್ಪುʼ ಮತ್ತು ಜ.4 ರಂದು ಭಾನುವಾರ ಸಂಜೆ 7 ರಿಂದ ಶಂಕರ್ ವೆಂಕಟೇಶ್ವರ್ ನಿರ್ದೇಶನದ ಜಿ. ಶಂಕರ್ ಪಿಳೈ ಬರೆದ ಮಲೆಯಾಳ ಮೂಲದ ಡಾ.ನಾ ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿದ ʼಅವತರಣಮ್ ಭ್ರಾಂತಾಲಯಮ್ʼ ನಾಟಕ ನಡೆಯಲಿದೆ. ಪ್ರವೇಶ ದರ ಒಬ್ಬರಿಗೆ ರೂ 100/- ಊಟದ ವ್ಯವಸ್ಥೆಯಿದೆ. ಕಲಾಸಕ್ತರು ಆಗಮಿಸುವಂತೆ ಕಾರ್ಯಕ್ರಮದ ಆಯೋಜಕರಾದ ರಾಘವೇಂದ್ರ ಹಾಲ್ಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here