







ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಯಕ್ಷರಂಗ ಪುತ್ತೂರು ಮತ್ತು ಯಕ್ಷಮಿತ್ರ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಶ್ರೀ ಪೆರ್ಡೂರು ಮೇಳದವರಿಂದ ಬಡಗುತ್ತಿಟ್ಟು ಯಕ್ಷಗಾನ ಬಯಲಾಟ `ಚಂದ್ರಹಾಸ-ಬಬ್ರುವಾಹನ’ ಪೌರಾಣಿಕ ಕಥಾನಕ ಡಿ.31 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಟೆಂಟ್ ವ್ಯವಸ್ಥೆಯೊಂದಿಗೆ ಜರಗಿತು.



ಹಿಮ್ಮೇಳದಲ್ಲಿ: ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸನ್ನ ಭಟ್ ಬಾಳ್ಕಲ್, ಸಂಗೀತ ಸತೀಶ್ ಪಟಗಾರ ಬ್ರಹ್ಮೂರು, ಮೃದಂಗ ಶಶಾಂಕ ಆಚಾರ್ಯ ಕಿರಿಮಂಜೇಶ್ವರ,ಅನಿರುದ್ಧ ಹೆಗಡೆ ವರ್ಗಾಸರ, ಚೆಂಡೆ ಪ್ರಜ್ವಲ್ ಮುಂಡಾಡಿ,ನಯನ ಕುಮಾರ್ ನಿಟ್ಟೂರು ಹಾಗೂ ಮುಮ್ಮೇಳದಲ್ಲಿ ಹಾಸ್ಯ ರವೀಂದ್ರ ದೇವಾಡಿಗ ಕಮಲಶಿಲೆ,ಪುರಂದರ ಮೂಡ್ಕಣಿ, ಸ್ತ್ರೀ ಭೂಮಿಕೆ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ,ನಾಗರಾಜ್ ಭಟ್ ಕುಂಕಿಪಾಲ,ಸಂತೋಷ್ ಕುಲಾಲ್ ಹೆಂಗವಳ್ಳಿ,ಪ್ರಥಮ್ ಆಚಾರ್ಯ, ಪುರುಷ ಪಾತ್ರದಲ್ಲಿ ನೀಲ್ಕೋಡು ಶಂಕರ ಹೆಗಡೆ, ಕಾರ್ತಿಕ್ ಚಿಟ್ಟಾಣಿ, ಮಾಗೋಡು ಅಣ್ಣಪ್ಪ, ಚಂದ್ರಹಾಸ ಗೌಡ ಹೊಸಪಟ್ನ, ಸನ್ಮಯ ಭಟ್, ಕಾರ್ತಿಕ್ ಕಣ್ಣಿಮನೆ, ಪವನ್ ಹೆಗಡೆ ಸಾಣ್ಣನೆ, ಕೆ.ಜಿ.ಕಾರ್ತಿಕ್, ಭಾಸ್ಕರ ಮರಾಠಿ ಭಾಗವಹಿಸಿದರು.




ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ ಹಾಗೂ ಯಕ್ಷರಂಗ ಪುತ್ತೂರು ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರಿ ಮತ್ತು ಯಕ್ಷಮಿತ್ರ ಪುತ್ತೂರು ಇದರ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಸಹಕರಿಸಿದರು. ತಾ.ಪಂ, ಕಾರ್ಯ ನಿರ್ವಹಣಾದಿಕಾರಿ ನವೀನ್ ಕುಮಾರ್ ಭಂಡಾರಿ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.












