ತಿಂಗಳಾಡಿ ಕನ್ನಡಮೂಲೆ ಅಯ್ಯಪ್ಪ ಮಂದಿರದ ಪ್ರತಿಷ್ಠಾ ಮಹೋತ್ಸವ

0

ಶ್ರೀ ಅಯ್ಯಪ್ಪ ಸ್ವಾಮಿಯ ಪುನಃ ಪ್ರತಿಷ್ಠೆ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಕನ್ನಡಮೂಲೆಯಲ್ಲಿರುವ ನವೀಕೃತ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠಾ ಮಹೋತ್ಸವ ಜ.1ರಂದು ಕ್ಷೇತ್ರದ ತಿಮ್ಮಪ್ಪ ಗುರುಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು.

ಅರ್ಚಕ ರಾಮಪ್ರಸಾದ್ ನೆಲ್ಲಿಗುರಿ ಇವರ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ ನಡೆದು ನಾಗ ಸಾನಿಧದಲ್ಲಿ ಆಶ್ಲೇಷ ಬಲಿ, ನಾಗ ತಂಬಿಲ ಸೇವೆ ನಡೆಯಿತು. ಬೆಳಿಗ್ಗೆ 9.50 ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪುನಃ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಅಯ್ಯಪ್ಪ ದೇವರ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸುಮಾರು ಐನ್ನೂರಕ್ಕೂ ಅಧಿಕ ಮಂದಿ ಆಗಮಿಸಿ ದೇವರ ಪ್ರಸಾದ ಅನ್ನಪ್ರಸಾದ ಸ್ವೀಕರಿಸಿದರು.

ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಂದಿರದ ರೂವಾರಿಗಳಾದ ತಿಮ್ಮಪ್ಪ ಗುರುಸ್ವಾಮಿಯವರು ಭಕ್ತಾಧಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದದವರು ಸೇರಿದಂತೆ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು. ತಿಮ್ಮಪ್ಪ ಗುರುಸ್ವಾಮಿ ಅವರು ತಾರುಣ್ಯದಿಂದಲೇ ಶಬರಿ ಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ವ್ರತಧಾರಿಗಳಾಗಿ ಯಾತ್ರೆ ಹೋಗುತ್ತಿದ್ದರು. 45 ವರ್ಷಗಳ ಹಿಂದೆ ಕನ್ನಡಮೂಲೆಯಲ್ಲಿ ಅಯ್ಯಪ್ಪ ಮಂದಿರ ನಿರ್ಮಿಸಿ ಕನ್ನಡಮೂಲೆಯ ಮಣ್ಣಿನಲ್ಲಿ ಶ್ರೀ ಅಯ್ಯಪ್ಪ ದೇವರ ಮಂದಿರ ಆರಾಧನೆಗೆ ಕಾರಣರಾಗಿದ್ದರು. ಇಲ್ಲಿ ನಿರಂತರ ಭಜನೆ, ಸಂಕ್ರಾಂತಿ ಸೇವೆ, ವಾರ್ಷಿಕ ಭಜನಾ ಮಹೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದವು. ಕಳೆದ 5 ದಶಕಗಳ ಅವಧಿಯಲ್ಲಿ ಸಾವಿರಾರು ಅಯ್ಯಪ್ಪ ಭಕ್ತರಿಗೆ ಮಾಲೆ ಹಾಕಿ ಶಬರಿಮಲೆ ಯಾತ್ರೆಗೆ ಕರೆದುಕೊಂಡು ಹೋಗಿರುವ ತಿಮ್ಮಪ್ಪ ಗುರುಸ್ವಾಮಿ, ಹಳೆಯ ಅಯ್ಯಪ್ಪ ಮಂದಿರವನ್ನು ಭಕ್ತರ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿದ್ದು ಸುಂದರವಾಗಿ ತಲೆ ಎತ್ತಿರುವ ಸಾನಿಧ್ಯ, ಕೆದಂಬಾಡಿ, ಸರ್ವೆ, ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಅಪೂರ್ವ ಅಯ್ಯಪ್ಪ ಮಂದಿರವಾಗಿ ಮೂಡಿ ಬಂದಿದೆ. ಈ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪುನಃ ಪ್ರತಿಷ್ಠೆ ನಡೆಯಿತು.

LEAVE A REPLY

Please enter your comment!
Please enter your name here