ಕೊಯಿಲ: ಆತ್ಮಹತ್ಯೆಗೆ ಯತ್ನಿಸಿದ ಯುವಕ ನಿಧನ

0

ರಾಮಕುಂಜ: ಬೆಂಗಳೂರಿನಿಂದ ಊರಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬ ತಾಲೂಕಿನ ಕೊಯಿಲ ನಿವಾಸಿ ಯುವಕ ಜ.24ರಂದು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿಯಾಗಿದೆ.

ಕೊಯಿಲ ಗ್ರಾಮದ ಜನತಾ ಕಾಲೋನಿ ನಿವಾಸಿ ಮುನೀರ್ (32ವ.)ಮೃತ ಯುವಕ.

ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ಮುನೀರ್ ಪತ್ನಿ, ಮಗನನ್ನು ಬೆಂಗಳೂರಿನಲ್ಲಿ ಬಿಟ್ಟು ಡಿ.25ರಂದು ಊರಿಗೆ ಬಂದಿದ್ದರು. ಜ.3ರಂದು ರಾತ್ರಿ 9 ಗಂಟೆಗೆ ರಾಮಕುಂಜ ಗ್ರಾಮದ ನೀರಾಜೆ ಆಯಿಷಾ ಶಾಲೆಯ ಬಳಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಮುನೀರ್‌ನನ್ನು ಹಗ್ಗದಿಂದ ಕೆಳಗಿಳಿಸಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದ ಮುನೀರ್ ಜ.24ರಂದು ರಾತ್ರಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ನಾಪತ್ತೆಯಾಗಿದ್ದ ಪತ್ನಿ, ಮಕ್ಕಳು ಠಾಣೆಗೆ ಹಾಜರು
ಮುನೀರ್ ಆತ್ಮಹತ್ಯೆ ವಿಚಾರ ಆತನ ಪತ್ನಿ ನೇಹಾಗೆ ತಿಳಿಸಲು ಮನೆಯವರಲ್ಲಿ ಲಭ್ಯವಿದ್ದ ದೂರವಾಣಿ ಕರೆ ಮಾಡಿದರೂ ನೇಹಾ ಕರೆ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಮುನೀರ್ ಪತ್ನಿ ನೇಹಾ (26) ತನ್ನ ಮಗ ಮಹಮ್ಮದ್ ನಿಹಾಲ್ (4)ನೊಂದಿಗೆ ಕಾಣೆಯಾಗಿರುವುದಾಗಿ ಮುನೀರ್‌ನ ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ನೇಹಾ ಮಗನ ಜೊತೆಗೆ ಕಡಬ ಠಾಣೆಗೆ ಬಂದು ಹಾಜರಾಗಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here