






ಪುತ್ತೂರು: ದ್ವಾರಕಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ನಡೆಸಲ್ಪಡುವ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಶಾಲಾ ನೂತನ ಕಟ್ಟಡಗಳ ಶಂಕುಸ್ಥಾಪನಾ ಭೂಮಿ ಪೂಜಾ ಕಾರ್ಯಕ್ರಮ ಜ.26ರಂದು ನಡೆಯಿತು.


ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಭೂಮಿ ಪೂಜಾ ಕಾರ್ಯಕ್ರಮದ ವಿಧಿ ವಿಧಾನ ನೆರವೇರಿಸಿದರು.




ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಅಮೃತ ಕೃಷ್ಣ ಎನ್, ಸಂಚಾಲಕ ವಿಘ್ನೇಶ ಹಿರಣ್ಯ, ನಿರ್ದೇಶಕರಾದ ವೆಂಕಟ ಕೃಷ್ಣ ಶರ್ಮ ಮಿಂಚಿನಡ್ಕ ದೇರ್ಲ, ಪರಮೇಶ್ವರ ಭಟ್ ಗೋಕುಲ, ಗಣರಾಜ ಕುಂಬ್ಲೆ, ಪ್ರತಿಭಾ ಪ್ರೌಢಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೂಡಿಕೆ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಕೇಶವಪ್ರಸಾದ್ ನೀಲಗಿರಿ, ಶ್ರೀಕೃಷ್ಣ ಆಂಗ್ಲಮಾಧ್ಯಮ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸತೀಶ್ ಕೊಪ್ಪಳ ಪ್ರತಿಭಾ ಪ್ರೌಢ ಶಾಲಾ ಮುಖ್ಯ ಗುರುಸುಮನಾ ಬಿ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ರಾಜಗೋಪಾಲ ಎನ್.ಕಛೇರಿ ಅಢಳಿತಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪಟ್ಟೆ ಶ್ರೀ ಕೃಷ್ಣ ಹಿ. ಪ್ರಾ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿಯರಾದ ಯಮುನಾ ವೖೆಕೆ ನಾಯ್ಕ, ಶಂಕರಿ ಪಟ್ಟೆ, ಷಡುಮಲೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ ಪಟ್ಟೆ ಜಯಪ್ರಕಾಶ್ ಅಚಾರ್ಯ ಕುರ್ಚಿಲ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕ ವೃಂದದವರು ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು










