






ಪುತ್ತೂರು: ಪಿಎಂಶ್ರೀ ಸ.ಹಿ.ಪ್ರಾಶಾಲೆ ವೀರಮಂಗಲ,ಪುತ್ತೂರು ಇಲ್ಲಿ 77 ನೇ ವರ್ಷದ ಗಣರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.


ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಧ್ವಜಾರೋಹಣ ಮಾಡಿದರು. ಎಸ್ ಡಿ ಎಂ ಸಿ ಸದಸ್ಯರಾದ ರಮೇಶ್ ಗೌಡ, ಡಾ. ಬಿ ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಉಮ್ಮರ್,ಚಂದ್ರಾವತಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ,ಪೋಷಕರಾದ ಗಣೇಶ್ ಉಪಸ್ಥಿತರಿದ್ದರು.



ಶಾಲಾ ಮುಖ್ಯಗುರು ತಾರಾನಾಥ ಪಿ ಸ್ವಾಗತಿ,ಸಿ ಗಣರಾಜ್ಯ ದಿನದ ಮಹತ್ವವನ್ನು ಸಾರಿದರು. ಶಿಕ್ಷಕರಾದ ಹರಿಣಾಕ್ಷಿ,ಶೋಬಾ ಶ್ರೀಲತಾ,ಕವಿತಾ ಹೇಮಾವತಿ, ಶಿಲ್ಪರಾಣಿ,ಸೌಮ್ಯ ಸಂಚನಾ ಭಾಗವಹಿಸಿ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.ಮಕ್ಕಳಿಂದ ಆಕರ್ಷಕ ಬ್ಯಾಂಡ್ ಘೋಷ್, ಕವಾಯತ್, ಸೇವಾದಳದವರಿಂದ ಡಂಬೆಲ್ಸ್,ಸ್ಕೌಟ್ ಗೈಡ್ ದಳದಿಂದ ದೇಶಭಕ್ತಿಗೀತೆಗಳು ನಡೆಯಿತು.










