ಫೆ.1: ಸುದಾನ ಶಾಲಾ ಮೈದಾನದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮಿಲನ ಅಂಶು

0

ಪುತ್ತೂರು: ಲಯನ್ಸ್ ಇಂಟರ್ ನ್ಯಾಶನಲ್ ಪ್ರಾಂತ 7ನೇಯ ಪ್ರಾಂತೀಯ ಸಮ್ಮಿಲನಅಂಶು ಭರವಸೆಯ ಬೆಳಕು ಕಾರ್ಯಕ್ರಮ ಫೆ.1ರಂದು ಸಂಜೆ 4 ಗಂಟೆಗೆ ನೆಹರುನಗರ ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಲ.ಪಿ.ಆನಂದ್ ರೈ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಲಯನ್ಸ್ ಕ್ಲಬ್ ವ್ಯಾಪ್ತಿಯ ಪ್ರಾಂತೀಯ ಸಮ್ಮಿಲನದಲ್ಲಿ 7 ಮಂದಿ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಪತ್ರಿಕೋದ್ಯಮ ವಿಭಾಗದಲ್ಲಿ ಡಾ. ಯು.ಪಿ.ಶಿವಾನಂದ್, ಸಮಾಜ ಸೇವೆ ವಿಭಾಗದಲ್ಲಿ ಅನಿತಾ ಹೇಮನಾಥ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಭಟ್, ಕಲಾ ಕ್ಷೇತ್ರದಲ್ಲಿ ವಿದುಷಿ ನಯನಾ ವಿ ರೈ, ಶಿಕ್ಷಣ ಕ್ಷೇತ್ರದಲ್ಲಿ ಭಾಗ್ಯೇಶ್ ರೈ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶಿವಪ್ರಸಾದ್ ಶೆಟ್ಟಿ, ಮಾನವೀಯ ಸೇವೆಯಲ್ಲಿ ನಯನಾ ರೈ ನೆಲ್ಲಿಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುದರ್ಶನ ಪಡಿಯಾರ್, ಕ್ರೀಡಾ ಕ್ಷೇತ್ರದಲ್ಲಿ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಪ್ರಾಂತೀಯ ಪ್ರಥಮ ಮಹಿಳೆ ಸುಮಿತಾ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಲ.ಪಿ. ಆನಂದ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಅರವಿಂದ ಚೊಕ್ಕಾಡಿ ಹಾಗೂ ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲರುಗಳಾದ ಎಂ.ಬಿ. ಸದಾಶಿವ ಮತ್ತು ಡಾ.ಗೀತಪ್ರಕಾಶ್ ಎ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷ ಟಿ.ಸದಾನಂದ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ಪ್ರಶಾಂತ್ ಕೆ ಕೋಶಾಧಿಕಾರಿ ಸುಂದರ ಗೌಡ ಎಚ್ ಭಾಗವಹಿಸಲಿದ್ದಾರೆ. ವಲಯಾಧ್ಯಕ್ಷರಾದ ಜೆಸಿಂತಾ ಎಸ್ ಮಸ್ಕರೇನಸ್, ಜಗನ್ನಾಥ ರೈ, ವಲಯ ರಾಯಭಾರಿಗಳಾದ ಸದಾಶಿವ ಟಿ, ರಮೇಶ್ ರೈ ಸಾಂತ್ಯ, ಮಾಜಿ ಪ್ರಾಂತ್ಯಾಧ್ಯಕ್ಷರಾದ ಗಣೇಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಸುದರ್ಶನ ಪಡಿಯಾರ್, ಲ್ಯಾನ್ಸಿ ಮಸ್ಕರೇನಸ್, ಬಿ.ಪಾವನರಾಮ, ವಿಟ್ಲ ಕ್ಲಬ್ ಅಧ್ಯಕ್ಷ ಡಿ.ಸಂಜೀವ ಪೂಜಾರಿ, ಕಾವು ಕ್ಲಬ್ ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ, ಪುತ್ತೂರುಮುತ್ತು ಕ್ಲಬ್ ಅಧ್ಯಕ್ಷೆ ವೇದಾವತಿ ರಾಜೇಶ್, ಆಲಂಕಾರು ಕ್ಲಬ್ ಅಧ್ಯಕ್ಷ ಪದ್ಮಪ್ಪ ಗೌಡ, ಬೆಳ್ಳಾರೆ ಕ್ಲಬ್ ಅಧ್ಯಕ್ಷ ಯತೀಶ್ ಭಂಡಾರಿ, ಪುತ್ತೂರು ಕ್ಲಬ್ ಅಧ್ಯಕ್ಷ ಅಂಥೋನಿ ಒಲಿವೆರಾ, ಲಿಯೋ ಕ್ಲಬ್ ಅಧ್ಯಕ್ಷರುಗಳಾದ ಪ್ರಾಪ್ತಿ ಶೆಟ್ಟಿ, ಚಿಂತನ್ ಸಾಲ್ಯಾನ್, ಶ್ರೀವತ್ಸ ಕೆ.ಎಸ್, ಪ್ರತೀಕ ಆರ್, ಅತಿಥೇಯ ಸಂಸ್ಥೆಯಾದ ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಕಾರ್ಯದರ್ಶಿ ಅರವಿಂದ ಭಗವಾನ್ ರೈ ಹಾಗೂ ಕೋಶಾಧಿಕಾರಿ ಸುಧಾಕರ್ ಕೆ.ಪಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಟಿ.ಸದಾನಂದ ಶೆಟ್ಟಿ, ಕಾರ್ಯದರ್ಶಿ ಕೃಷ್ಣಪ್ರಶಾಂತ್, ಕೋಶಾಧಿಕಾರಿ ಸುಂದರ ಗೌಡ ಎಚ್ ಹಾಗೂ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here