ಪೆರ್ಲಂಪಾಡಿ: ಗ್ರಾಮಾಭಿವೃದ್ಧಿ ಯೋಜನೆಯ ಸಾರಿಗೊಂಡೆ, ಸಾರಿ ಫೋಲ್ಡಿಂಗ್ ತರಬೇತಿ ಸಮಾರೋಪ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ಯೋಜನೆಯ ಪಾಲುದಾರರು ಸದಸ್ಯರಿಗೆ ಫೆ.02ರಿಂದ ಫೆ.06ರವರೆಗೆ ಕೊಳ್ತಿಗೆ ಅಂಬೇಡ್ಕರ್ ಭವನದಲ್ಲಿ 5 ದಿನದ ಸಾರಿ ಗೊಂಡೆ ಹಾಗೂ ಸಾರಿ ಫೋಲ್ಡಿಂಗ್ ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದು ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕಿನ ಕೇಂದ್ರ ಒಕ್ಕೂಟಗಳ ಅಧ್ಯಕ್ಷರಾದ ಉದಯ್ ಕುಮಾರ್ ಜಿ ಕೆ ಇವರು ವಹಿಸಿದ್ದರು. ಅತಿಥಿಯಾಗಿದ್ದ ಷಣ್ಮುಖ ದೇವ ಪ್ರೌಢಶಾಲೆಯ ಸಂಚಾಲಕ ಶಿವರಾಮ ಭಟ್ ಮಾತನಾಡುತ್ತಾ ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ವಿಶೇಷ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಮಹಿಳೆಯರನ್ನು ಸಬಲರನ್ನಾಗಿ ಮಾಡಿದರೆ ಆರ್ಥಿಕವಾಗಿ ಆ ಕುಟುಂಬ ಸದೃಢವಾಗುತ್ತದೆ. ತಾವು ಪಡೆದಂತ ತರಬೇತಿಯನ್ನು ಜೀವನದುದ್ದಕ್ಕೂ ಮುನ್ನಡೆಸಿಕೊಂಡು ಹೋಗಿ ಯಶಸ್ಸನ್ನು ಗಳಿಸಿ ಎಂದು ಶುಭಹಾರೈಸಿದರು.

ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇಲ್ಲಿಯ ಪ್ರಾಂಶುಪಾಲ ರಮೇಶ್ ಮಾತನಾಡುತ್ತಾ ದುಡಿಯುವ ಕೈಗಳಿಗೆ ಕೆಲಸ ಬೇಕು, ಈ ನಿಟ್ಟಿನಲ್ಲಿ ಯೋಜನೆಯಿಂದ ಹತ್ತಾರು ಸ್ವ-ಉದ್ಯೋಗಗಳ ತರಬೇತಿಗಳನ್ನು ನಡೆಸಿ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಇಂತಹ ಸ್ವ ಉದ್ಯೋಗ ಪೂರಕವಾದ ತರಬೇತಿಗಳನ್ನು ಮಹಿಳೆಯರು ಪಡೆದು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಪಡೆದಂತ ತರಬೇತಿಯನ್ನು ಮುಂದುವರಿಸಿಕೊಂಡು ಹೋದರೆ ಮಾತ್ರ ಜೀವನದಲ್ಲಿ ಉದ್ಯೋಗದ ಯಶಸ್ಸು ಕಾಣಲು ಸಾಧ್ಯ ಎಂದು ಶುಭ ಹಾರೈಸಿದರು. ತರಬೇತಿ ಪಡೆದಂತಹ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಸದಸ್ಯರಾದ ರತ್ನಾವತಿ, ಕವಿತಾ,ಸುಮಿತ ಹಾಗೂ ಪವಿತ್ರ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಸುನೀಲ್, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯ ಉಪನ್ಯಾಸಕಿ ಧರಣಿ, ವಲಯ ಮೇಲ್ವಿಚಾರಕಿ ಶುಭವತಿ, ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳ, ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಗೌಡ, ಐದು ದಿನ ತರಬೇತಿ ನೀಡಿದ ತರಬೇತು ಶಿಕ್ಷಕಿ ದಿವ್ಯಶ್ರೀ ಎ. ಕೆ, ತರಬೇತಿ ಪಡೆದಂತಹ ಸದಸ್ಯರು ಉಪಸ್ಥಿತರಿದ್ದರು. ಸದಸ್ಯೆ ಶ್ರುತಿ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಶಾರದ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿಡಬ್ಲ್ಯೂಇ ಮೂಕಾಂಬಿಕಾ ವಂದಿಸಿದರು.

LEAVE A REPLY

Please enter your comment!
Please enter your name here