






ಪುತ್ತೂರು: ಅರಿಯಡ್ಕ ಗ್ರಾಮದ ಎರ್ಕ ನಿಂಜೂರು ಪಡುಮನೆ ದಿ.ಚಂದ್ರಶೇಖರ ಶೆಟ್ಟಿಯವರ ಪತ್ನಿ ಅರಿಯಡ್ಕ ಭಾಗೀರಥಿ ಶೆಟ್ಟಿ (86ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಫೆ.08 ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಸಹೋದರರಾದ ಎ.ಕೆ ರೈ ಅರಿಯಡ್ಕ, ಶಶಿಕುಮಾರ್ ರೈ ಅರಿಯಡ್ಕ, ಸಹೋದರಿಯರಾದ ಸುಲೋಚನಾ ಜೆ.ಶೆಟ್ಟಿ ಅರಿಯಡ್ಕ, ಮೋಹಿನಿ ಡಿ.ಹೆಗ್ಡೆ ಅರಿಯಡ್ಕ ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.













