ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ : ಶ್ರೀ ದೇವರಿಗೆ ಬೆಳ್ಳಿಯ ಕವಚದ ಮುಚ್ಚಿಗೆ, ಬೆಳ್ಳಿಯ ಪುಷ್ಪಕನ್ನಡಿ ಸಮರ್ಪಣೆ

0

ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವರಿಗೆ ದೇವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವರ ಪಂಚಲೋಹದ ಉತ್ಸವ ಮೂರ್ತಿಗೆ 1 ಕೆ.ಜಿ. ಬೆಳ್ಳಿಯನ್ನು ಉಪಯೋಗಿಸಿ ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ ಹಾಗೂ ದೇವರ ಮೂರ್ತಿಗೆ ಬೆಳ್ಳಿಯ ಕವಚದ ಮುಚ್ಚಿಗೆಯ ಸೇವೆಯನ್ನು ರೂ. 2,5೦,೦೦೦/- (ರೂಪಾಯಿ ಎರಡು ಲಕ್ಷದ ಐವತ್ತು ಸಾವಿರ) ವೆಚ್ಚದಲ್ಲಿ ವನಿತಾ ಮತ್ತು ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ ಹಾಗೂ ಮಕ್ಕಳು ಇವರು ಸೇವಾರೂಪದಲ್ಲಿ ಅರ್ಪಿಸಿದ್ದಾರೆ.


ಇದಲ್ಲದೆ ದೇವರ ದರ್ಶನಬಲಿ ಉತ್ಸವಕ್ಕೆ 3 ಕೆ.ಜಿ. 107 ಗ್ರಾಂ ಬೆಳ್ಳಿಯನ್ನು ಉಪಯೋಗಿಸಿ ಬೆಳ್ಳಿಯ ಪುಷ್ಪಕನ್ನಡಿ ಸೇವೆಯನ್ನು ರೂ. 7,47,೦೦೦/- (ರೂಪಾಯಿ ಏಳು ಲಕ್ಷದ ನಲವತ್ತೇಳು ಸಾವಿರ) ವೆಚ್ಚದಲ್ಲಿ ಕೆದಂಬಾಡಿ ಗ್ರಾಮದ ಕುಂಬ್ರ ಕುರಿಕ್ಕಾರ ರೈ ನಿಲಯದ ಡಾ. ಅನುಶ್ರೀ ಎ. ರೈ ಮಾಲೆಂಗಿರಿ, ಎಡಮಂಗಲ ಮತ್ತು ಅಕ್ಷಿತ್ ಕುಮಾರ್ ರೈ ಎ. ಹಾಗೂ ಮನೆಯವರು ಸೇವಾರೂಪದಲ್ಲಿ ಅರ್ಪಿಸಿದ್ದಾರೆ ಎಂದು ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ರೈ ಬಾಕುಡ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here