ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ ಸಂಪನ್ನ

0

ದೇವಳದ ಪರಿವಾರ ದೈವಗಳ ನೇಮೋತ್ಸವ- ಅನ್ನಸಂತರ್ಪಣೆ

ಪುತ್ತೂರು: ಹಾಲು ಪಾಯಸ ಸೇವೆಗೆ ಒಲಿಯುವ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವೆ ಗ್ರಾಮದ ಎಲಿಯದಲ್ಲಿ ನೆಲೆ ನಿಂತಿರುವ ಶ್ರೀ ವಿಷ್ಣುಮೂರ್ತಿ ದೇವರ ವೈಭವದ ಜಾತ್ರೋತ್ಸವವು ಫೆ.೦6 ಮತ್ತು ೦7 ರಂದು ವಿಜೃಂಭಣೆಯಿಂದ ಜರಗಿತು. ಫೆ.೦6 ರಂದು ಶ್ರೀ ದೇವರ ಜಾತ್ರೋತ್ಸವ ನಡೆದರೆ, ೦7 ರಂದು ಕ್ಷೇತ್ರದ ದೈವಗಳಿಗೆ ಅದ್ಧೂರಿ ನೇಮೋತ್ಸವ ಜರಗಿತು.

ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು ಸಂಜೆ ದೇವಳದ ಪರಿವಾರ ದೈವಗಳಾದ ಪಿಲಿಭೂತ, ರಕ್ತೇಶ್ವರಿ, ಶಿರಾಡಿ ದೈವ, ಕುಪ್ಪೆ ಪಂಜುರ್ಲಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಅಡ್ಕರೆಗುಂಡಿಯಿಂದ ಕಾವಲು ದೈವ ಗುಳಿಗನ ಭಂಡಾರವನ್ನು ಮೆರವಣಿಗೆಯಲ್ಲಿ ದೇವಳಕ್ಕೆ ತರುವ ಕಾರ್ಯಕ್ರಮ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ದೈವಗಳಿಗೆ ವೈಭವದ ನೇಮೋತ್ಸವ ನಡೆಯಿತು.


4 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಜಾತ್ರೋತ್ಸವದ ಅಂಗವಾಗಿ ಫೆ.05 ಹೊರೆಕಾಣಿಕೆಯಿಂದ ಹಿಡಿದು ನೇಮೋತ್ಸವದ ತನಕ ಸುಮಾರು 4 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಗೌರವಾಧ್ಯಕ್ಷರುಗಳಾದ ಬೂಡಿಯಾರು ರಾಧಾಕೃಷ್ಣ ರೈ, ರಾಜಾರಾಮ್ ಮುಡಂಬಡಿತ್ತಾಯ ಸೊರಕೆ, ವ್ಯವಸ್ಥಾಪನಾ: ಉದಯ ಕುಮಾರ್ ರೈ ಬಾಕುಡ, ಜಾತ್ರಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಸರ್ವೆ, ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಸೊರಕೆ, ಸಂಚಾಲಕರಾದ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಪಿ, ಪವಿತ್ರ ಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಮಹಿಳಾ ಸಮಿತಿ ಅಧ್ಯಕ್ಷೆ ಸುಲೋಚನಾ ಬಾಲಚಂದ್ರ ರೈ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಎಸ್. ಆನಂದ ರಾವ್, ರಾಧಾಕೃಷ್ಣ ರೈ ಚಾವಡಿ, ಪ್ರವೀಣ್ ಪ್ರಭು ಕೆ, ಚಂದ್ರಶೇಖರ ನೆಕ್ಕಿಲು, ಗಣೇಶ್ ನೇರೋಳಡ್ಕ, ಸುನೀತಾ ಎಸ್ ರೈ ಸೊರಕೆ, ಯಶೋದ ಡಿ.ನೆಕ್ಕಿಲು ಹಾಗೂ ವಿವಿಧ ಸಮಿತಿ ಸಂಚಾಲಕರು ಮತ್ತು ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಹಾಗೂ ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯರು ಗ್ರಾಮದ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.


‘ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ ಅತ್ಯಂತ ಭಕ್ತಿ,ಶ್ರದ್ಧೆಯಿಂದ ನಡೆದಿದೆ. ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತರು ದೇವರಿಗೆ ಬೆಳ್ಳಿಯ ಕವಚದ ಮುಚ್ಚಿಗೆ ಹಾಗೇ ಬೆಳ್ಳಿಯ ಪುಷ್ಪಕನ್ನಡಿ ಅರ್ಪಿಸಿದ್ದಾರೆ. ಇದಲ್ಲದೆ ವಿವಿಧ ರೀತಿಯಲ್ಲಿ ದೇವರ ಸೇವೆ ಮಾಡಿದ ಸಮಸ್ತ ಜನತೆಗೆ ಶ್ರೀ ದೇವರು ಸನ್ಮಂಗಳವನ್ನು ಉಂಟು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ..’
ಉದಯ ಕುಮಾರ್ ರೈ ಬಾಕುಡ, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ

LEAVE A REPLY

Please enter your comment!
Please enter your name here