






ಪುತ್ತೂರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಗುತ್ತಿಗಾರು, ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದಿಂದ 5ನೇ ವರ್ಷಾಚರಣೆ ಪ್ರಯುಕ್ತ ಫೆ.8ರಂದು ಚಿಕ್ಮುಳಿ ಸಭಾಭವನ ಗುತ್ತಿಗಾರಿನಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 1ನೇ ರಿಂದ 2 ತರಗತಿ ವರೆಗಿನ ಹುಡುಗರ ವಿಭಾಗದಲ್ಲಿ ಗಾಯನ್ ಆರೆಂಬಿ ತೃತೀಯ ಸ್ಥಾನ ಗಳಿಸಿದ್ದಾರೆ.


ಇವರು ಕಡಬದ ಅಜಂತ ಪ್ಯಾಶನ್ ಟೈಲರ್ ನ ಮಾಲಕರಾದ ಎಣ್ಮೂರು ಗ್ರಾಮದ ಆರೆಂಬಿ ನಿವಾಸಿ ರಾಧಾಕೃಷ್ಣ ಮತ್ತು ನಳಿನಿ ರವರ ಪುತ್ರ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯದಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿರಂತರ ಯೋಗ ಕೇಂದ್ರ ನಿಂತಿಕಲ್ ನಲ್ಲಿ ಯೋಗ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.













