ದೇರಾಜೆ: ಮನೆ ಸಮೀಪದ ಗುಡ್ಡದಲ್ಲಿ ಬೃಹತ್ ನೀರಿನ ತೊಟ್ಟಿ ನಿರ್ಮಾಣ…!?

0

ಅಪಾಯದಲ್ಲಿದೆ ಅಟ್ಲಾರ್ ವಾಸಪ್ಪ ನಾಯ್ಕರ ವಾಸದ ಮನೆ
ಮಳೆಗಾಲದಲ್ಲಿ ಗುಡ್ಡ ಕುಸಿದು ಮನೆ ಕೊಚ್ಚಿ ಹೋಗುವ ಭಯ…!

ಪುತ್ತೂರು: ಮನೆಯಿಂದ ಕೇವಲ 20 ಮೀಟರ್ ದೂರದಲ್ಲಿ ಗುಡ್ಡದ ಮೇಲೊಂದು ಬೃಹತ್ ಗಾತ್ರದ ನೀರಿನ ತೊಟ್ಟಿ ರಚನೆ ಮಾಡಿರುವ ಪರಿಣಾಮ ಮನೆ ಅಪಾಯದ ಸ್ಥಿತಿಗೆ ತಲುಪಿದ್ದು, ಬಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಾಜೆ ಸಮೀಪದ ಅಟ್ಲಾರ್ ನಿವಾಸಿ ವಾಸಪ್ಪ ನಾಯ್ಕ ಎಂಬವರು ಈ ಕುರಿತು ಪುತ್ತೂರು ತಹಶೀಲ್ದಾರರಿಗೆ, ಶಾಸಕರಿಗೆ, ಬಲ್ನಾಡು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಅಟ್ಲಾರು ವಾಸಪ್ಪ ನಾಯ್ಕರವರ ಮನೆಯ ಪಕ್ಕದಲ್ಲೇ ಅಂದರೆ ಕೇವಲ ಮೀಟರ್ ಅಳತೆ ದೂರದಲ್ಲಿ ಆಕಾಂಕ್ಷ ಎನ್.ರೈ ಎಂಬವರು ಗುಡ್ಡದ ಮೇಲೆ ಬೃಹತ್ ಗಾತ್ರದ ನೀರಿನ ತೊಟ್ಟಿ ರಚನೆ ಮಾಡಿದ್ದಾರೆ. ಇದರಿಂದ ವಾಸಪ್ಪ ನಾಯ್ಕರ ಮನೆಗೆ ಮಳೆಗಾಲದಲ್ಲಿ ಭಾರೀ ಅಪಾಯ ಕಾದಿದ್ದು ಗುಡ್ಡ ಕುಸಿತಗೊಂಡರೆ ವಾಸಪ್ಪ ನಾಯ್ಕ ಮನೆ ಸಂಪೂರ್ಣ ನೆಲಸಮ ಆಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ವಾಸಪ್ಪ ನಾಯ್ಕರು ಪುತ್ತೂರು ತಹಶೀಲ್ದಾರರಿಗೆ, ಶಾಸಕರಿಗೆ, ಬಲ್ನಾಡು ಗ್ರಾಮ ಪಂಚಾಯತ್‌ಗೆ ನನ್ನ ಮನೆಯನ್ನು ಉಳಿಸಿಕೊಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಸಪ್ಪ ನಾಯ್ಕರ ಕುಟುಂಬವು ಕಳೆದ 80 ವರ್ಷಗಳಿಂದ ಬಲ್ನಾಡು ಗ್ರಾಮದ ಅಟ್ಲಾರು ಎಂಬಲ್ಲಿ ವಾಸವಿದ್ದು ಪ್ರಸ್ತುತ ವಾಸಪ್ಪ ನಾಯ್ಕರ ತಾಯಿ ಪಾರ್ವತಿ, ಪತ್ನಿ ರತ್ನಾವತಿ, ಇಬ್ಬರು ಮಕ್ಕಳು, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಸರ್ವೆ ನಂಬ್ರ 118/6 ರಲ್ಲಿ 0.43 ಎಕ್ರೆ ಸರ್ವೆ ನಂಬ್ರ 118/3 ರಲ್ಲಿ 0.18 ಎಕ್ರೆ ಸರ್ವೆ ನಂಬ್ರ 118/4 ರಲ್ಲಿ 0.02 ಎಕ್ರೆ ಸರ್ವೆ ನಂಬ್ರ 119/1ಎ2ಎ ರಲ್ಲಿ 0.17 ಎಕ್ರೆ ಕೃಷಿ ಜಮೀನು ಇದ್ದು ಈ ಜಮೀನಿನಲ್ಲಿ ವಾಸ್ತವ್ಯದ ಮನೆಯೊಂದಿಗೆ ಕೃಷಿ ಕಾರ್ಯ ಮಾಡಿಕೊಂಡಿದ್ದಾರೆ. ಇದೀಗ ನೀರಿನ ತೊಟ್ಟಿ ನಿರ್ಮಾಣದಿಂದ ಮನೆಗೆ, ಪ್ರಾಣಕ್ಕೆ ಆಗಬಹುದಾದ ಹಾನಿಯನ್ನು ನೆನೆದು ನಿದ್ದೆ ಇಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.









LEAVE A REPLY

Please enter your comment!
Please enter your name here