ಅಸ್ಮಿತಾ ಸ್ವಿಮ್ಮಿಂಗ್ ಲೀಗ್ ಮಲ್ಟಿ ಸಿಟಿ ಲೀಗ್ ಸ್ಪರ್ಧೆ : ಪುತ್ತೂರು ಬಾಲವನ ಈಜು ತಂಡಕ್ಕೆ 7 ಚಿನ್ನ, 8 ಬೆಳ್ಳಿ, 5 ಕಂಚು

0

ಪುತ್ತೂರು: ಅಕ್ವೆಟಿಕ್ ಕ್ಲಬ್ ವತಿಯಿಂದ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಆಯೋಜಿಸಲಾಗಿದ್ದ ಅಸ್ಮಿತಾ ಸ್ವಿಮ್ಮಿಂಗ್ ಲೀಗ್ ಮಲ್ಟಿ ಸಿಟಿ ಲೀಗ್ ಸ್ಪರ್ಧೆಯಲ್ಲಿ ಪುತ್ತೂರಿನ ಬಾಲವನದ ಈಜುಪಟುಗಳ ತಂಡ 7 ಚಿನ್ನ, 8 ಬೆಳ್ಳಿ, 5 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಸಾನ್ವಿ ಸಿ ಎಚ್ ಅವರು 50 ಮೀ. ಫ್ರೀಸ್ಟೈಲ್, 50 ಮೀ. ಬ್ಯಾಕ್‌ಸ್ಟ್ರೋಕ್, 50 ಮೀ. ಬ್ರೆಸ್ಟ್‌ಸ್ಟ್ರೋಕ್, 50ಮೀ. ಬಟರ್‌ಫ್ಲೈ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ರೀಷಾ ಪಿ. ಶೆಟ್ಟಿ ಅವರು 100 ಮೀ. ಫ್ರೀಸ್ಟೈಲ್, 50 ಮೀ. ಫ್ರೀಸ್ಟೈಲ್, 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮಹೇಕ್ ರವಿಕುಮಾರ್ ಕೋಠಾರಿ ಅವರು 50 ಮೀ. ಬ್ಯಾಕ್‌ಸ್ಟ್ರೋಕ್, 50 ಮೀ. ಬಟರ್‌ಫ್ಲೈ, 100 ಮೀ. ಬ್ಯಾಕ್‌ಸ್ಟ್ರೋಕ್, 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಇಶಾನಿ ಆರ್ ರೈ ಅವರು 25 ಮೀ. ಬಟರ್‌ಫ್ಲೈ, 25 ಮೀ. ಬ್ರೆಸ್ಟ್‌ಸ್ಟ್ರೋಕ್, 25 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಹಾಗೂ 25 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಸ್ಥಾ ಎ ಅವರು 25ಮೀ. ಬಟರ್‌ಫ್ಲೈ, 25 ಮೀ. ಬ್ರೆಸ್ಟ್‌ಸ್ಟ್ರೋಕ್, 25 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪೂರ್ವಿಕಾ ಎಸ್.ಎಚ್. ಅವರು 25 ಮೀ. ಬ್ರೆಸ್ಟ್‌ಸ್ಟ್ರೋಕ್ ಹಾಗೂ 25 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಒಟ್ಟಾರೆಯಾಗಿ ಬಾಲವನ ಈಜು ತಂಡವು ಒಟ್ಟು 20 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈಜುಪಟುಗಳು ಬಾಲವನದಲ್ಲೇ ಈಜು ತರಬೇತಿಯನ್ನು ಪಡೆಯುತ್ತಿದ್ದು, ಪಾರ್ಥ ವಾರಣಾಶಿ, ಕ್ರತಿ ತೇಜ, ತ್ರಿಶೂಲ್ ಗೌಡ, ವಿಕಾಸ್ ಹಾಗೂ ಶಿಶಿಲ್ ಗೌಡ ಅವರು ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here