ಫೆ.27 ಪುಣಚ ದೇವಿನಗರ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದಲ್ಲಿ ಅರ್ಧಏಕಾಹ ಭಜನೆ- ಗೋಂದೋಳು ಪೂಜೆ

0

ಪುಣಚ: ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಶ್ರೀ ಆದಿಶಕ್ತಿ ಮಹಮ್ಮಾಯಿ ಆರಾಧನಾ ಮಂದಿರದಲ್ಲಿ ಅರ್ಧಏಕಾಹ ಭಜನಾ ವಾರ್ಷಿಕೋತ್ಸವ ಹಾಗೂ ರಾತ್ರಿ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.27ರಂದು ನಡೆಯಲಿದೆ.


ಅಂದು ಬೆಳಿಗ್ಗೆ ಪುಣಚ ನಾರಾಯಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆಯಲಿದೆ. ಕಲ್ಲಾಜೆ ಈಶ್ವರ ನಾಯ್ಕ ದಂಪತಿ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಮಹಾಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪೂಜಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here