ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾಮಹೋತ್ಸವ: ತೋರಣ ಮೂಹೂರ್ತ, ಧ್ವಜಾರೋಹಣ 

0

ಬಡಗನ್ನೂರು : ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆ 25ರಂದು ಪ್ರಾರಂಭವಾಗಿದ್ದು, ಮಾ. 1ರ ವರೆಗೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿದೆ.

ಫೆ 26 ರಂದು ಗಣಪತಿ ಹೋಮ, ಗುರುಪೂಜೆ, ತೋರಣ ಮೂಹೂರ್ತ, ನಾಗದೇವರ ಸಾನಿಧ್ಯದಲ್ಲಿ ನವಕಲಶ, ಆಶ್ಲೇಷ ಬಲಿ ಮತ್ತು ಧೂಮಾವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ದಿ ನವಕ ಕಲಶಾಭಿಷೇಕ, 11.35ಕ್ಕೆ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ  ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

ಕ್ಷೇತ್ರ ತಂತ್ರಿವರ್ಯರಾದ ಮೂಡುಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನಗಳು ನೆರವೇರಿತು. ಈ ಸಂಧರ್ಭದಲ್ಲಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಆಡಳಿತ ಮೂಕ್ತೇಸರ ಶ್ರೀಧರ ಪೂಜಾರಿ, ಗೆಜ್ಜೆಗಿರಿ, ಟ್ರಸ್ಟಿಗಳಾದ ಲೀಲಾವತಿ ಗೆಜ್ಜೆಗಿರಿ, ರವಿಂದ್ರ ಪೂಜಾರಿ ಗೆಜ್ಜೆಗಿರಿ, ಹರೀಶ್ ಪೂಜಾರಿ ಕೆ, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಮಹಾಬಲ ಪೂಜಾರಿ ಗೆಜ್ಜೆಗಿರಿ ಹಾಗೂ ಸಮಿತಿ ಸದಸ್ಯರು ಮತ್ತು ಊರಪರವೂರ ಭಕ್ತಾದಿಗಳು ಭಾಗವಹಿಸಿದರು. ಸಂಜೆ  ಭಗವತೀ ಸೇವೆ, ಧೂಮಾವತಿ ಬಲಿ ಉತ್ಸವ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ,  ರಾತ್ರಿ  ಕಲ್ಲಾಲ್ದಾಯ ಗುಳಿಗ ನೇಮೋತ್ಸವ ನಡೆಯಲಿದೆ.

 ಫೆ..27 ಬೆಳಿಗ್ಗೆ ಗಂ 6 ರಿಂದ ಗಣಪತಿ ಹೋಮ, ಧೂಮಾವತಿ ಸಾನಿಧ್ಯದಲ್ಲಿ ಶುದ್ದಿ ಕ್ರಿಯೆಗಳು,8 ರಿಂದ : ಧೂಮಾವತಿ ದೈವದ ಭಂಡಾರ ಇಳಿಯುವುದು,9 ರಿಂದ : ಧೂಮಾವತಿ ನೇಮೋತ್ಸವ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ಬಳಿಕ ಅನ್ನಸಂತರ್ಪಣೆ, ಸಂಜೆ ಗಂ 6 ರಿಂದ ಧೂಮಾವತಿ ಬಲಿ ಉತ್ಸವ, ರಾತ್ರಿ 7.00ರಿಂದ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು,7.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ರಾತ್ರಿ 8.30ರಿಂದ ಕುಪ್ಪೆ ಪಂಜುರ್ಲಿ ಮತ್ತು ಕೊರತಿ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here