ಈಶ್ವರಮಂಗಲ ಶ್ರೀ ಗಜಾನನ ಆ.ಮಾ ಶಾಲೆಯ ಮುಖ್ಯೋಪಾಧ್ಯಾಯರಾಗಿ ಚಿನ್ಮಯ ಪನೆಯಾಲ ಅಧಿಕಾರ ಸ್ವೀಕಾರ

0

ಈಶ್ವರಮಂಗಲ : ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ನೂತನ ಮುಖ್ಯೋಪಾಧ್ಯಾಯರಾಗಿ ಚಿನ್ಮಯ ಪನೆಯಾಲ(ಎಮ್ ಎಸ್ಸಿ ಬಿ ಎಡ್) ಇವರು ಅಧಿಕಾರ ವಹಿಸಿಕೊಂಡರು.

ಶಾಲಾಡಳಿತ ಮಂಡಳಿಯ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ ಹಾಗೂ ಸಂಚಾಲಕ ಶಿವರಾಮ್ ಪಿ ಇವರು ಶಾಲು ಹಾಕಿ ಸ್ಮರಣಿಕೆ ನೀಡಿ ದೀಪ ಹಸ್ತಾಂತರಿಸುವ ಮೂಲಕ ಮುಖ್ಯೋಪಾಧ್ಯಾಯರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ, ಸೌಮ್ಯ ಎ ಹಾಗೂ ಲತಾ ಡಿ ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here