







ಪುತ್ತೂರು: ಪ್ರಗತಿಪರ ಕೃಷಿಕರಾದ ಮಠಂತಬೆಟ್ಟು ಕೇದಗೆ ಕುಟುಂಬದ ಯಜಮಾನ ಸಂಜೀವ ಶೆಟ್ಟಿ (96ವ.) ಮಾ.10ರಂದು ಕುಂಬ್ರದ ತಮ್ಮ ನಿವಾಸದಲ್ಲಿ ನಿಧನರಾದರು.


ಮೃತರು ಮಕ್ಕಳಾದ ವನಜಾ, ಗೀತಾ, ಜೀವನ ಹಾಗೂ ಜ್ಯೋತಿ, ಅಳಿಯಂದಿರಾದ ಪ್ರಭಾಕರ್ ರೈ ಎನ್.ಜಿ, ನಿವೃತ್ತ ಮುಖ್ಯಗುರು ಸುಧಾಕರ್ ರೈ ಮತ್ತು ಪ್ರದೀಪ್ ರೈ ಮೇನಾಲ ಹಾಗೂ ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.



ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕುಂಬ್ರ ಬೂಡಿಯಾರ್ ಇಂಡೇನ್ ಗ್ಯಾಸ್ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ, ಬಂಟರ ಸಂಘದ ಪುತ್ತೂರು ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು ಹಾಗೂ ಪದಾಧಿಕಾರಿಗಳು, ಹಿರಿಯ ಸಹಕಾರಿ ಧುರೀಣ ನಾರಾಯಣ ರೈ ಪರ್ಪುಂಜ ಬಾರಿಕೆ, ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ನಿರ್ದೇಶಕ ಕುಂಬ್ರ ದಯಾಕರ್ ಆಳ್ವ, ಹಿರಿಯರಾದ ಕುಂಬ್ರ ವೆಂಕಪ್ಪ ರೈ ಹಾಗೂ ರಕ್ಷಿತ್ ರೈ ಮುಗೇರು ಸೇರಿದಂತೆ ಅನೇಕ ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.










