







ಪಾಣಾಜೆ ಗ್ರಾಮ ಸಮಿತಿಯ 38 ಭಕ್ತರಿಂದ ಕೋಟಿ ಶ್ರೀರಾಮ ತಾರಕ ಜಪದೀಕ್ಷೆ ಸ್ವೀಕಾರ


ಪುತ್ತೂರು: ದಕ್ಷಿಣ ಭಾರತದ ಇತಿಹಾಸದಲ್ಲೇ ಅತ್ಯಂತ ಕಾರಣಿಕತೆಯ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರವಾಗಿರುವ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ `ಹನುಮಗಿರಿ ಬ್ರಹ್ಮಕಲಶೋತ್ಸವ’ವು ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.9 ರಿಂದ ಆರಂಭಗೊಂಡು12 ರ ತನಕ ವಿಜೃಂಭಣೆಯಿಂದ ಜರಗಲಿದೆ.




ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುವ ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಜಪದೀಕ್ಷೆಯ ಅಂಗವಾಗಿ ಪಾಣಾಜೆ ಗ್ರಾಮ ಸಮಿತಿಯ ಸುಮಾರು 38 ಭಕ್ತರಿಂದ ಶ್ರೀರಾಮ ತಾರಕ ಜಪ ದೀಕ್ಷೆಯು ಹನುಮಗಿರಿ ಕ್ಷೇತ್ರದಲ್ಲಿ ಮಾ.13 ರಂದು ನಡೆಯಿತು. ಕ್ಷೇತ್ರದ ಅರ್ಚಕರಾದ ರಾಜೇಶ್ ಭಟ್, ಮಹೇಶ್ ಭಟ್‌ರವರು ಕೋಟಿ ಶ್ರೀರಾಮ ತಾರಕ ಜಪ ಯಜ್ಷದ ದೀಕ್ಷೆ ನೀಡಿದರು. ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಬ್ರಹ್ಮಕಲಶೋತ್ಸವ ಹಾಗೂ ಜಪದೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಧರ್ಮದರ್ಶಿ ಶಿವರಾಮ ಪಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ, ನಗರ ಗ್ರಾಮ ಸಮಿತಿ ರಚನೆಯ ಸಂಚಾಲಕ ಸಾಜ ರಾಧಕೃಷ್ಣ ಆಳ್ವ, ಪಾಣಾಜೆ ಗ್ರಾಮ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರೈ, ಶ್ರೀರಾಮ ತಾರಕ ಜಪಯಜ್ಞದ ಸಂಚಾಲಕ ಡಾ. ಅಖಿಲೇಶ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಹುಷ ಪಿ.ವಿ ಉಪಸ್ಥಿತರಿದ್ದರು.
ಜಪದೀಕ್ಷೆಗೆ ಅವಕಾಶ
ಹನುಮಗಿರಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುವ ಕೋಟಿ ಶ್ರೀರಾಮ ತಾರಕ ಜಪದೀಕ್ಷೆ ಪಡೆಯಲು ಭಕ್ತರಿಗೆ ಇನ್ನೂ ಕೂಡ ಅವಕಾಶವಿದ್ದು ಜಪ ದೀಕ್ಷೆ ಪಡೆಯುವ ಗ್ರಾಮ ಸಮಿತಿಯ ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ಜಪ ದೀಕ್ಷೆ ಪಡೆದುಕೊಳ್ಳಬಹುದಾಗಿದೆ ಎಂದು ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.










