






ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನ ಕುಕ್ಕಾಜೆ ಇಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಇಲ್ಲಿನ 15 ವಿದ್ಯಾರ್ಥಿಗಳ ಚಿತ್ತಾರ ತಂಡವು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 10,000 ನಗದು ಬಹುಮಾನ ಹಾಗೂ ಡಾ ವಿಶ್ವನಾಥ್ ಕುಕ್ಕಾಜೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.



ಈ ಸ್ಪರ್ಧೆಯಲ್ಲಿ ಕಾಮಜಲು ಶಾಲೆಯ 15 ವಿದ್ಯಾರ್ಥಿಗಳು 35 ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.4 ನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ರಿಷಿಕಾ ಕೆ ಅದ್ಬುತವಾದ ನಿರೂಪಣೆಯ ಮೂಲಕ ಎಲ್ಲಾ ಪ್ರೇಕ್ಷಕರ ಮನಗೆದ್ದರು ..5 ನೆಯ ತರಗತಿಯ ವಿದ್ಯಾರ್ಥಿನಿ ಸ್ಮಿತಾ ಎಸ್ ಕುಲಾಲ್ ಇವಳು ದ್ರೌಪದಿಯ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಉತ್ತಮ ಪರ್ಫಾರ್ಮರ್ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ,ಪುತ್ತೂರು ಯುವಸಿರಿ ಕಲಾವಿದೆರ್, ವಿಟ್ಲ ಕಲ್ಕಿ ಡ್ಯಾನ್ಸ್ ಗ್ರೂಪ್ ,ಮಾಣಿಲ ಟೀಮ್ ಚಿತ್ತಾರ ಶ್ರೀ ಕಾನ ಡ್ಯಾನ್ಸ್ ಗ್ರೂಪ್ ಪೆರ್ಲ, ಕಾಸರಗೋಡು ಮುರಳಿ ಬ್ರದರ್ಸ್ ಡ್ಯಾನ್ಸ್ ಕ್ರೀವ್, ಪುತ್ತೂರು ಈ 6 ಅದ್ಬುತ ತಂಡಗಳು ಭಾಗವಹಿಸಿದ್ದು ಅತ್ಯುತ್ತಮ ಪ್ರದರ್ಶನ ನೀಡಿದ ಕಾಮಜಲು ಶಾಲೆಯ ವಿದ್ಯಾರ್ಥಿಗಳ ತಂಡ ಟೀಮ್ ಚಿತ್ತಾರ ಪ್ರಥಮ ಸ್ಥಾನದೊಂದಿಗೆ ರೂಪಾಯಿ 10,000 ನಗದು ಬಹುಮಾನವನ್ನು ಹಾಗೂ ಡಾ.ವಿಶ್ವನಾಥ್ ಕುಕ್ಕಾಜೆ ಟ್ರೋಫಿಯನ್ನು ಪಡೆದುಕೊಂಡಿತು.



ಶಾಲೆಯ ಅತಿಥಿ ಶಿಕ್ಷಕಿ ಕುಮಾರಿ ಸುಶ್ಮಿತಾ ಕೆ ನೃತ್ಯ ನಿರ್ದೇಶನವನ್ನು ನೀಡಿದ್ದರು. ಶಿಕ್ಷಕಿ ಮಾಲತಿ ಎನ್ ಪ್ರಹಸನದ ನಿರ್ದೇಶನವನ್ನು ನೀಡಿದ್ದರು. ಶೇಡಿಗುಳಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಾಮನಾಯ್ಕ ಕೆ ಇವರು ಕೀಬೋರ್ಡ್ ನಲ್ಲಿ ಸಹಕರಿಸಿದ್ದರು ಶಿಕ್ಷಕಿಯರಾದ ಸುಧಾಸಂದೇಶ್ ಹಾಗೂ ಸರಿತಾನಾಯ್ಕ ಸಹಕರಿಸಿದ್ದರು. ಭಾವನಾ ಕಲಾ ಆರ್ಟ್ಸ್ ಬೊಳುವಾರು ಪುತ್ತೂರು ಇವರು ವೇಷ ಭೂಷಣ ವಸ್ತ್ರಾಲಂಕಾರ ಹಾಗೂ ಮುಖವರ್ಣಿಕೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ ಕುಲಾಲ್ ಪಿ, ಉಪಾಧ್ಯಕ್ಷ ಮೋಹನ ಕೆ, ಎಸ್ ಡಿ ಎಂ ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.









