






ಪುತ್ತೂರು: ಆಕ್ವಾಕಲ್ಚರ್ ವಿಭಾಗದ ಸಂಶೋಧನಾ ವಿಷಯದಲ್ಲಿ ಪುತ್ತೂರಿನ ನೆಹರುನಗರ ಕಲ್ಲೇಗ ನಿವಾಸಿ ಶಿವಾನಿ ಡಿ ಗೌಡ ಅವರಿಗೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಮತ್ತು ಚಿನ್ನದ ಪದಕ ಪ್ರದಾನ ಮಾಡಿದೆ.


ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌ನಲ್ಲಿ ನಡೆದ 15ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪದವಿ ಮತ್ತು ಚಿನ್ನದ ಪದಕವನ್ನು ಪ್ರದಾನ ಮಾಡಿದರು.



ಈ ಸಂದರ್ಭದಲ್ಲಿ ವಿ.ವಿ.ಯ ಸಹಕುಲಪತಿಗಳಾದ ಕೆ.ವೆಂಕಟೇಶ್, ಕೆ.ಸಿ. ವೀರಣ್ಣ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಕೃಷಿ ವಿಭಾಗದ ವಿದ್ಯಾರ್ಥಿನಿ ಶಿವಾನಿ ಡಿ ಗೌಡ ಅವರು ಹಿರಿಯ ಪ್ರಾಧ್ಯಾಪಕ ಹಾಗೂ ಜಲಕೃಷಿ ವಿಭಾಗದ ಮುಖ್ಯಸ್ಥ ಡಾ. ಗಣಪತಿ ನಾಯ್ಕ ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಶಿವಾನಿ ಡಿ ಗೌಡ ಅವರು ಪುತ್ತೂರು ನೆಹರುನಗರ ಕಲ್ಲೇಗ ನಿವಾಸಿ ಟಿ. ಡಿ. ಗೌಡ ಮತ್ತು ಮೀನಾಕ್ಷಿ ಡಿ. ಗೌಡ ಅವರ ಪುತ್ರಿ ಹಾಗೂ ಸರ್ಫಿಂಗ್ ಪಟು ಸಿಂಚನ ಡಿ. ಗೌಡ ಅವರ ಸಹೋದರಿ.










