ಪುತ್ತೂರಿನಲ್ಲಿದ್ದವರ ‘ಸುದ್ದಿ’, ವ್ಯವಹಾರ, ಸೇವೆ ಪರವೂರಿನಲ್ಲಿರುವ ಪುತ್ತೂರಿನವರಿಗೆ-ಪರವೂರಿನಲ್ಲಿರುವ ಪುತ್ತೂರಿನವರ ‘ಸುದ್ದಿ’, ವ್ಯವಹಾರ, ಸೇವೆ ಪುತ್ತೂರಿನವರಿಗೆ ತಲುಪಿದರೆ ಜಗತ್ತಿನಾದ್ಯಂತ ಇರುವ ಪುತ್ತೂರಿನವರ ಸಂಪರ್ಕ, ಅಭಿವೃದ್ಧಿ ಖಂಡಿತ

0

ನಿಮ್ಮ ನಿಮ್ಮ ಮನೆಯವರ, ಸ್ನೇಹಿತರ, ಸಂಬಂಧಿಕರ ಹೆಸರು, ಊರು, ವ್ಯವಹಾರ, ಫೋನ್ ನಂಬ್ರ ಸುದ್ದಿ ಜಾಲಕ್ಕೆ ನೀಡಿ ಅಭಿವೃದ್ಧಿಗೆ ಸಹಕರಿಸಿ


ವರ್ಷಗಳ ಹಿಂದೆ 38 ಪುತ್ತೂರಿನಲ್ಲಿ ಪತ್ರಿಕೆ ನಂತರ ಇ-ಪೇಪ‌ರ್, ವೆಬ್‌ಸೈಟ್, ಚಾನೆಲ್ ಪ್ರಾರಂಭಿಸಿದಲ್ಲಿಂದ ಪುತ್ತೂರಿನವರು ಎಲ್ಲಿದ್ದರೂ ಅವರ ಸುದ್ದಿಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಪರಸ್ಪರರಿಗೆ ಅದನ್ನು ಹಂಚಿದ್ದೇವೆ. ಅಭಿವೃದ್ಧಿಯಲ್ಲಿ ಸಂತೋಷ ಪಟ್ಟಿದ್ದೇವೆ. ಇಂದಿನ ಅಂತರ್ಜಾಲದ ಯುಗದಲ್ಲಿ, ಸಾಮಾಜಿಕ ಜಾಲತಾಣದ ಕಾಲದಲ್ಲಿ ಕ್ಷಣ ಮಾತ್ರದಲ್ಲಿ ಸುದ್ದಿ, ಫೊಟೋ, ವೀಡಿಯೋಗಳನ್ನು ಎಲ್ಲಿಂದ ಎಲ್ಲಿಗೋ ತಲುಪಿಸಬಹುದು. ಅಂಗೈಯಲ್ಲಿಯೂ ನೋಡಬಹುದು. ಅದರೊಂದಿಗೆ ಅವರ ವ್ಯವಹಾರ, ಸೇವೆ, ಉದ್ದಿಮೆಗಳ ಮಾಹಿತಿಯನ್ನು ಜಗತ್ತಿನಾದ್ಯಂತ ಹಂಚುವ ಮೂಲಕ ಪರಸ್ಪರರ ಅಭಿವೃದ್ಧಿಗೆ ಕಾಣರಾಗಬಹುದು. ಈ ಕಾರಣಕ್ಕೆ ಪುತ್ತೂರಿನವರು ತಮ್ಮ ಮಾಹಿತಿಯನ್ನು ನೀಡುವುದಲ್ಲದೆ, ತಮ್ಮವರು ಜಗತ್ತಿನಾದ್ಯಂತ ಎಲ್ಲಿದ್ದರೂ ಅವರ ಮಾಹಿತಿಯನ್ನು ‘ಸುದ್ದಿ’ ಜಾಲಕ್ಕೆ ಮತ್ತು ‘ಸುದ್ದಿ’ ಅರಿವು ಕೇಂದ್ರಕ್ಕೆ ನೀಡಿರಿ. ಪುತ್ತೂರಿನವರು ಊರಿನಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು ಅಭಿವೃದ್ಧಿಯತ್ತ ಸಾಗಲು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಡಾ. ಯು.ಪಿ. ಶಿವಾನಂದ
[email protected]



LEAVE A REPLY

Please enter your comment!
Please enter your name here