ಸವಣೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಖಂಡಿಸಿ ಪ್ರತಿಭಟನಾ ಸಭೆ

0

ಪುತ್ತೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಅಡಿಯಲ್ಲಿ ನಮ್ಮೂರಿನ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಅಂಬೇಡ್ಕರ ಭವನದಲ್ಲಿ ಮಾ.31ರಂದು ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪಾಲಕರೊಂದಿಗೆ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

ಈ ಭಾಗದಲ್ಲಿರುವ ಅರೆಲ್ತಡಿ, ಆಮೖೆ, ಪುಣ್ಚಪ್ಪಾಡಿ ಕುಮಾರಮಂಗಳ, ಸವಣೂರು ಮೊಗರು ಹಾಗೂ ಇನ್ನೂ ಹಲವು ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಯೋಜನೆಯನ್ನು ಖಂಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವ ಊರಿನ ಶಾಲೆಯನ್ನು ಮುಚ್ಚಿ, ದೂರದ ಕೆಪಿಎಸ್ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ, ಗುಡ್ಡಗಾಡು ಪ್ರದೇಶಗಳಲ್ಲಿ ಬದುಕು ಸಾಗಿಸುವ ಜನ, ಊರಿನ ಶಾಲೆ ಮುಚ್ಚಿದರೆ, ಶಿಕ್ಷಣದ ಬಾಗಿಲು ಮುಚ್ಚಿದಂತೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು. ಹಾಗೆಯೇ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಿಸದಂತೆ ನಿರ್ಣಯವನ್ನು ಈ ಸಭೆಯಲ್ಲಿ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿ ಈ ಕರಾಳ ಯೋಜನೆಯ ಕುರಿತು ಚರ್ಚಿಸುವುದರ ಜೊತೆಗೆ, ಹೋರಾಟವನ್ನು ಹಳ್ಳಿ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಟ್ಟಿ ಬೆಳೆಸುವಂತೆ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಕೋಶಾಧಿಕಾರಿ ಗಳಾದ ಉಸ್ಮಾನ್ ನೆಕ್ಕಿಲು, ಸವಣೂರು ಪಂಚಾಯತ್ ಸದಸ್ಯರಾದ ಬಾಬು, ಅಬ್ದುಲ್ ರಜಾಕ್ ಹಾಗೂ ಗಿರಿಶಂಕರ್ ಸುಳಾಯ, ಎಐಡಿ ಎಸ್ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ವಿನಯ್ ಚಂದ್ರ ಹಾಗೂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಶ್ವಂತ್ ಮತ್ತು ಸವಣೂರು ಮೊಗರು ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಫೀಕ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here