ನಾಳೆ ಏ.5ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0


ಪುತ್ತೂರು: ಏ.10ರಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭಗೊಳ್ಳಲಿರುವ ಪುತ್ತೂರು ಜಾತ್ರೆಯ ಅಂಗವಾಗಿ ದೇವಳದ ವಠಾರದಲ್ಲಿ ಭಕ್ತರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.


ಬೆಳಿಗ್ಗೆ ಗಂಟೆ 8 ರಿಂದ 11ರ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವವರು ಹಿಡಿಸೂಡಿ, ಕಸದ ಬುಟ್ಟಿ, ಹಾರೆ, ಕತ್ತಿ ಇದ್ದಲ್ಲಿ ತರುವಂತೆ ವಿನಂತಿ ಅದರ ಜೊತೆಗೆ ದೇವಳದಲ್ಲಿ ನೀರು ಹಾಕಿ ತೊಳೆಯಲು ಅಡಿಕೆ ಮರಕ್ಕೆ ಬಿಡುವ ಔಷಧಿಯ ಪಂಪ್ ಇದ್ದರೆ ತರುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here