






ಅಕ್ಷಿತಾ ಕಲ್ಲಡ್ಕ


ಮಕ್ಕಳು ಸಾಮಾನ್ಯವಾಗಿ ಸ್ಕೂಲ್ ಬಸ್ಸಲ್ಲಿ ಶಾಲೆಗೆ ಹೋಗುವುದು ಆದ್ರೆ ನಾವು ಮಾತ್ರ ಜಾಲಿಯಾಗಿ ದಿನಂಪ್ರತಿ ಜೀಪ್ ನಲ್ಲಿ ಹೋಗುತ್ತಿದ್ದೆವು. ಅದು ಕೂಡ ಸರ ಶಾಲೆಗೆ ಉಚಿತವಾಗಿ.
ಅಂದಹಾಗೆ ಇದು ಸರಕಾರದ ಯಾವುದೇ ಉಚಿತ ಯೋಜನೆಯಲ್ಲ ಬದಲಿಗೆ ಸರಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ಶಿಕ್ಷಣ ಪ್ರೇಮಿಗಳು ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಇಂತಹ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದ್ದು ಇಲ್ಲಿಯ ಹಳೆ ವಿದ್ಯಾರ್ಥಿಯಾದ ನಮಗೆ ಹೆಮ್ಮೆಯ ಸಂಗತಿ.
ಅಂದಹಾಗೆ ನಮ್ಮ ಶಾಲೆ ಹೆಸರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆದ್ಲ ನಮ್ಮ ಶಾಲೆ ಒಂದು ಸರಳವಾದ ಪರಿಸರ ಸೀಮಿತ ಸೌಲಭ್ಯ ಗಳು ಆದ್ರೆ ಅಪಾರವಾದ ದೃಢ ನಿಶ್ಚಯ. ಶಿಕ್ಷಣವು ಎಲ್ಲರಿಗೂ ತಲುಪಬೇಕು ಎಂಬ ದೃಷ್ಟಿಕೋನದೊಂದಿಗೆ 1926ರಂದು ಆರಂಭವಾದ ಈ ನಮ್ಮ ಶಾಲೆ.ಪಠ್ಯಾಧಾರಿತ ಕಲಿಕೆಯ ಜೊತೆಗೆ ಜೀವನಪಾಠಗಳನ್ನು ಮಕ್ಕಳಿಗೆ ಕಲಿಸುತ್ತಾ ಬಂದಿದೆ.ಕೆದ್ಲ ಪ್ರಾಥಮಿಕ ಶಾಲೆಯ ವಿಶೇಷತೆಯೇ ಅದರ ಕಾಳಜಿಯ ಶಿಕ್ಷಣ ಮಾದರಿ. ಊರಿನ ಪ್ರತಿಯೊಬ್ಬ ಮಗುವೂ ಶಾಲೆಗೆ ಬರಬೇಕು, ಯಾರೂ ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಆಶಯದೊಂದಿಗೆ ಉಚಿತ ಜೀಪ್ ವ್ಯವಸ್ಥೆ, ಸಮವಸ್ತ್ರ, ಪುಸ್ತಕಗಳು ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದು ಮಕ್ಕಳಿಗೆ ನೀಡಿದ ಸೌಲಭ್ಯವಲ್ಲ, ಅವರ ಬದುಕಿನ ಮೇಲಿನ ನಂಬಿಕೆಯ ಸಂಕೇತ. ಈ ವ್ಯವಸ್ಥೆಗಳು ಅನೇಕ ಮಕ್ಕಳ ಪಾಲಿಗೆ ಶಾಲೆಯನ್ನು ಎರಡನೇ ಮನೆಯಂತೆ ಮಾಡಿದೆ.ಶಾಲೆಯ ದಿನಚರಿಯಲ್ಲಿ ಸಂಸ್ಕಾರವೇ ಕೇಂದ್ರಬಿಂದು.ಪ್ರತೀ ಶುಕ್ರವಾರ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನಲ್ಲಿ ಶಾಂತಿ, ಏಕಾಗ್ರತೆ ಮತ್ತು ಭಕ್ತಿಯ ಬೀಜವನ್ನು ಬಿತ್ತುತ್ತಿದ್ದವು. ಆ ದಿನ ಶಾಲೆಯ ವಾತಾವರಣವೇ ವಿಭಿನ್ನವಾಗುತ್ತಿತ್ತು. ಮಕ್ಕಳ ಸಿಹಿಯಾದ ಕಂಠಸಿರಿಯಲ್ಲಿ ಮೊಳಗುತ್ತಿದ್ದ ಭಜನೆಗಳು ಕಾಡಿನ ಮೌನದೊಂದಿಗೆ ಬೆರೆತು, ಒಂದು ಪವಿತ್ರ ಅನುಭವವನ್ನು ಸೃಷ್ಟಿಸುತ್ತಿದ್ದವು. ಆ ಕ್ಷಣಗಳು ಮಕ್ಕಳ ಬದುಕಿನಲ್ಲಿ ಅಚ್ಚಳಿಯದ ನೆನಪುಗಳಾಗಿ ಉಳಿದಿವೆ.



ಪಠ್ಯೇತರ ಚಟುವಟಿಕೆಗಳಲ್ಲೂ ಕೆದ್ಲ ಪ್ರಾಥಮಿಕ ಶಾಲೆ ಸದಾ ಮುಂಚೂಣಿಯಲ್ಲಿತ್ತು. ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಮಕ್ಕಳೊಳಗಿನ ಅಡಗಿದ ಪ್ರತಿಭೆಯನ್ನು ಹೊರತರುತ್ತಿದ್ದವು. ನೃತ್ಯ, ಹಾಡು, ಭಾಷಣ, ಕ್ರೀಡೆ – ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳಿಗೆ ಅವಕಾಶ ನೀಡಿ, ಅವರ ಆತ್ಮವಿಶ್ವಾಸವನ್ನು ಬೆಳೆಸಿದ ಶಾಲೆ ಇದು. ಅನೇಕ ವಿದ್ಯಾರ್ಥಿಗಳು ಇಲ್ಲಿ ಪಡೆದ ಪ್ರೋತ್ಸಾಹವೇ ಅವರ ಮುಂದಿನ ಬದುಕಿನ ಸಾಧನೆಗಳಿಗೆ ಅಡಿಪಾಯವಾಯಿತು.
ಅಂದಹಾಗೆ ಇದೀಗ ಶತಮಾನೋತ್ಸವದ ಗರಿಮೆಯೊಂದಿಗೆ ಹೆಮ್ಮೆಯಿಂದ ನಿಂತಿದೆ. ಇಲ್ಲಿ ಶಿಕ್ಷಕರ ಪತ್ರ ಬಹಳ ದೊಡ್ಡದಾಗಿದೆ.

ಅನೇಕ ಶಿಕ್ಷಕರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಈ ಶಾಲೆಗೆ ಅರ್ಪಿಸಿದ್ದಾರೆ. ಅವರು ಕೇವಲ ಪಾಠ ಹೇಳುವವರಾಗಿರಲಿಲ್ಲ; ಮಕ್ಕಳ ಪ್ರತಿಭೆಯನ್ನು ಗುರುತಿಸಿದವರು, ತಪ್ಪು ಮಾಡಿದಾಗ ತಿದ್ದಿದವರು, ಆತ್ಮವಿಶ್ವಾಸ ಕುಗ್ಗಿದಾಗ ಬೆನ್ನುತಟ್ಟಿದವರು.
“ನೀನು ಮಾಡಬಲ್ಲೆ” ಎಂಬ ಒಂದು ಮಾತು, “ನಾವು ನಿನ್ನ ಜೊತೆಯಲ್ಲಿದ್ದೇವೆ” ಎಂಬ ಒಂದು ನೋಟ – ಅನೇಕ ಮಕ್ಕಳ ಬದುಕಿಗೆ ಹೊಸ ದಿಕ್ಕು ನೀಡಿದ ಶಕ್ತಿ ಈ ಶಿಕ್ಷಕರಲ್ಲಿ ಇತ್ತು.ಪಠ್ಯೇತರ ಚಟುವಟಿಕೆಗಳಲ್ಲೂ ಕೆದ್ಲ ಪ್ರಾಥಮಿಕ ಶಾಲೆ ಸದಾ ಮುಂಚೂಣಿಯಲ್ಲಿತ್ತು. ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಮಕ್ಕಳೊಳಗಿನ ಅಡಗಿದ ಪ್ರತಿಭೆಯನ್ನು ಹೊರತರುತ್ತಿದ್ದವು. ನೃತ್ಯ, ಹಾಡು, ಭಾಷಣ, ಕ್ರೀಡೆ – ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳಿಗೆ ಅವಕಾಶ ನೀಡಿ, ಅವರ ಆತ್ಮವಿಶ್ವಾಸವನ್ನು ಬೆಳೆಸಿದ ಶಾಲೆ ಇದು. ಅನೇಕ ವಿದ್ಯಾರ್ಥಿಗಳು ಇಲ್ಲಿ ಪಡೆದ ಪ್ರೋತ್ಸಾಹವೇ ಅವರ ಮುಂದಿನ ಬದುಕಿನ ಸಾಧನೆಗಳಿಗೆ ಅಡಿಪಾಯವಾಯಿತು.
ಈ ಶಾಲೆಯ ಬೆಳವಣಿಗೆಯಲ್ಲಿ ಊರಿನ ಜನರ ಪಾತ್ರವೂ ಅತಿ ಮಹತ್ವದ್ದು. ಶಾಲೆ ಕೇವಲ ಒಂದು ಸಂಸ್ಥೆಯಾಗಿ ಅಲ್ಲ, ಊರಿನ ಗೌರವದ ಪ್ರತೀಕವಾಗಿ ಬೆಳೆದಿದೆ. ಶಾಲೆಯ ಅಭಿವೃದ್ಧಿಗಾಗಿ ಊರಿನವರು ನೀಡಿದ ಶ್ರಮ, ಸಹಕಾರ ಮತ್ತು ನಂಬಿಕೆ ಈ ಶತಮಾನ ಪೂರೈಸಿದ ಪಯಣಕ್ಕೆ ಬಲವಾದ ಬೆನ್ನೆಲುಬಾಗಿದೆ. ಶಾಲೆ ಮತ್ತು ಊರು ಒಂದೇ ಕುಟುಂಬದಂತೆ ಕೈಜೋಡಿಸಿ ಸಾಗಿದ ಕಥೆ ಇದು.
ಹಳೆಯ ವಿದ್ಯಾರ್ಥಿಗಳು ಇಂದು ಬೇರೆಬೇರೆ ಕ್ಷೇತ್ರಗಳಲ್ಲಿ ನೆಲೆಸಿರಬಹುದು, ಆದರೆ ಅವರ ಮನಸ್ಸಿನ ಒಂದು ಮೂಲೆಯಲ್ಲಿ ಕೆದ್ಲ ಪ್ರಾಥಮಿಕ ಶಾಲೆಯ ನೆನಪು ಸದಾ ಜೀವಂತವಾಗಿದೆ. ಮೊದಲ ದಿನ ಶಾಲೆಗೆ ಕಾಲಿಟ್ಟ ಕ್ಷಣ, ಮೊದಲ ಪ್ರಶಸ್ತಿ, ಮೊದಲ ಭಜನೆ, ಮೊದಲ ಗುರುನಮನ – ಈ ಎಲ್ಲಾ ನೆನಪುಗಳು ಅವರ ಬದುಕಿನ ಅಮೂಲ್ಯ ಪುಟಗಳಾಗಿ ಉಳಿದಿವೆ. ಈ ಶಾಲೆಯೇ ಅನೇಕ ಮಕ್ಕಳ ಬದುಕಿನ ದಿಕ್ಕನ್ನು ರೂಪಿಸಿದ ತಾಣವಾಗಿದೆ.
ಇಂದು, ನೂರು ವರ್ಷಗಳ ಹೆಜ್ಜೆ ಗುರುತುಗಳನ್ನು ಹಿಂದಿರುಗಿ ನೋಡಿದಾಗ, ಕೆದ್ಲ ಪ್ರಾಥಮಿಕ ಶಾಲೆ ಕೇವಲ ಇಟ್ಟಿಗೆ-ಕಲ್ಲಿನ ಕಟ್ಟಡವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದು ಕನಸುಗಳನ್ನು ಕಟ್ಟಿದ ಸ್ಥಳ, ಮೌಲ್ಯಗಳನ್ನು ಪಸರಿಸಿದ ಕೇಂದ್ರ, ಮತ್ತು ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಿದ ಪವಿತ್ರ ತೀರ್ಥಕ್ಷೇತ್ರ.










