






ಕಾವು: ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇಕಡ 100 ಫಲಿತಾಂಶ ಲಭಿಸಿದೆ .


ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟ್ರಿಕ್ಷನ್ ನಲ್ಲಿ ತೇರ್ಗಡೆಯಾದರೆ 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ..ಮುಷಿನ್ ಸಿದ್ದಿಕ್ 593ಅಂಕ ಮತ್ತು ರಿಫಾ ಫಾತಿಮಾ 593 ಅಂಕ ದೊಂದಿಗೆ ಪ್ರಥಮ ಸ್ಥಾನ, ಝಹೀರಾ 575 ಅಂಕದೊಂದಿಗೆ ದ್ವಿತೀಯ ಸ್ಥಾನ, ಫಾತಿಮಾತ್ ಶಹಲ 573 ಅಂಕದೊಂದಿಗೆ ತೃತೀಯ ಸ್ಥಾನವನ್ನು, ನಶ್ವಾ ಅಮೀನ 572 ಅಂಕ, ಇಮ್ರಾನ್ 570 ಅಂಕ, ಶಲ್ಮಿ ಹಾಫ್ಸತ್ 555 ಅಂಕ, ಆಫ್ರಿನ 550 ಅಂಕ, ಸಾನಿಯಾ ಎಂ ಜೆ 544 ಅಂಕ, ಫಾಝಿಲ್ 543 ಅಂಕ, ಹಾಸಿಮ್ 533 ಅಂಕ ಪಡೆದುಕೊಂಡಿರುತ್ತಾರೆ.













