ಎಸ್. ಎಸ್. ಎಲ್. ಸಿ. ಯಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಗೆ 100% ಫಲಿತಾಂಶ

0

ವಿಧ್ಯಾರ್ಥಿನಿ ಪೂರ್ವಿ ಎ. ಭಾರಧ್ವಜ್ 620 ಅಂಕ‌ ಪಡೆದು ತಾಲೂಕಿಗೆ ಪ್ರಥಮ

ವಿಟ್ಲ : 2025-26 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಾಣಿ – ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ
ಪೂರ್ವಿ ಎ. ಭಾರಧ್ವಜ್ ೬೨೦ಅಂಕ ಪಡೆದು ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದು, ಶಾಲೆಗೆ 100% ಫಲಿತಾಂಶ ಲಭಿಸಿದೆ.


ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೂರ್ವಿ ಎ ಭಾರಧ್ವಜ್ -620 ( 99.2%) ಪ್ರಥಮ ಸ್ಥಾನ, ಸಂಜನಾ ಎಸ್ ಭಟ್ -614 ( 98.24%) ದ್ವಿತೀಯ ಸ್ಥಾನ ಹಾಗೂ ಅಂಶಿಕ ಎಸ್ ಕೆ – 613 ( 98.08) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಉಳಿದಂತೆ ಪ್ರಗತಿ ಆರ್ ಸಾಲ್ಯಾನ್ (612), ಲಿಖಿತ್ ಕುಮಾರ್ ಎಲ್ (611), ಹಂಶಿಕಾ ಎಸ್ ಡಿ ಪೂಜಾರಿ (608), ಸ್ತುತಿ (606), ಅಭಿಜ್ಞಾ ಎಸ್ ಶೆಟ್ಟಿ (604), ಸಾನ್ವಿ ರೈ (603), ಎಂ.ಆದಿತ್ಯ ಶೆಟ್ಟಿ (602), ಸಮನ್ವಿ‌ ಎಸ್. ಶೆಟ್ಟಿ( 602) ನಿಧಿಶ(598), ಕೃತಿಕಾ ಎನ್.(597), ಪ್ರಣವ್ಯ(597), ಸಿಂಚನ್ (596), ಆಯಿಷಾ ರಿಫಾ(596), ಸಮೃದ್ಧಿ ರೈ(595) ಹಾಗೂ ಒಲಿಶ ನೊರೋನ್ಹ (594) ಅಂಕವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here