ಮೇ 2: ನೆಲ್ಲಿದಡಿ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದಲ್ಲಿ “ನೆಲ್ಲಿದಡಿ ಬಂಡಿ ಉತ್ಸವ”

0

ಪುತ್ತೂರು: ಬಜಪೆ ಗ್ರಾಮದ ನೆಲ್ಲಿದಡಿಯ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದಲ್ಲಿ ಮೇ 2ರಂದು ಶ್ರೀ ಧೂಮಾವತಿ ಮತ್ತು ಬಂಟ ದೈವಗಳ “ನೆಲ್ಲಿದಡಿ ಬಂಡಿ ಉತ್ಸವ” ನಡೆಯಲಿದೆ.

ಬಜಪೆ ಗ್ರಾಮದ ಗ್ರಾಮಸ್ಥರು ಪರಂಪರೆಯಿಂದ ಆರಾಧಿಸಿಕೊಂಡು ಬರುತ್ತಿರುವ ಈ ನೇಮೋತ್ಸವಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ದೈವಗಳ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾಗಬೇಕಾಗಿ ನೆಲ್ಲಿದಡಿಗುತ್ತು ಕ್ಷೇತ್ರದ ಗಡಿಪ್ರಧಾನರಾಗಿರುವ ಲಕ್ಷಣ ಚೌಟ ಹಾಗೂ ಬಜಪೆ ಗ್ರಾಮದ ಗುತ್ತು, ಬರ್ಕೆ ಮನೆತನದವರು ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.

ಉತ್ಸವದ ವಿವರ:
ಮೇ 1, 2026 ಶುಕ್ರವಾರ ಸಂಜೆ 6:00 ಗಂಟೆಗೆ ನೆಲ್ಲಿದಡಿಗುತ್ತುವಿನಿಂದ ಭಂಡಾರ ಹೊರಟು ಆರೋಹಣ ನಡೆಯಲಿದೆ. ಅದೇ ರಾತ್ರಿ “ತುಡರ ಬಲಿಸೇವೆ” ಜರುಗಲಿದೆ.

ಮೇ 2, 2026 ಶನಿವಾರ ರಾತ್ರಿ 10:00 ಗಂಟೆಯಿಂದ ದೈವದ ಗಗ್ಗರ ಸೇವೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಕಂಚಿಲು ಹರಕೆ ಸೇವೆ ಮಾಡಿಸಲು ಇಚ್ಛಿಸುವವರು ಪೂರ್ವ ಪದ್ಧತಿಯ ಕ್ರಮದಂತೆ ಮಾಡಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಉಚಿತ ಬಸ್ ವ್ಯವಸ್ಥೆ:
ಮೇ 2ರ ಶನಿವಾರ ಮಧ್ಯಾಹ್ನ 12:00 ಗಂಟೆಯಿಂದ ಬಜಪೆ ಪೇಟೆಯಿಂದ ದೈವಸ್ಥಾನಕ್ಕೆ ಹೋಗಿ ಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ದೈವಸ್ಥಾನಕ್ಕೆ ಆಗಮಿಸುವ ಭಕ್ತರು ತಮ್ಮ ಆಧಾರ್ ಕಾರ್ಡಿನ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಪದ್ಮನಾಭ – 9448152626, ಜಗದೀಶ – 9901492206 ಸಂಪರ್ಕಿಸಬಹುದಾಗಿದೆ. ಮಧ್ಯಾಹ್ನ 12:30 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here