






ಪುತ್ತೂರಿನಲ್ಲಿ ಕಳೆದ 38 ವರ್ಷಗಳಿಂದ ಸುದ್ದಿಬಿಡುಗಡೆ ಪ್ರಸಾರದಲ್ಲಿದ್ದು ಜಗತ್ತಿನಾದ್ಯಂತ ಇರುವ ಪುತ್ತೂರಿನವರನ್ನು ತಲುಪುತ್ತಿದೆ. ಅದನ್ನು ಓದಿದಾಗ ಊರಿಗೆ ಒಂದು ಸುತ್ತು ಹೊಡೆದ ಅನುಭವ ನೀಡುವ, ಘಟನೆಗಳ ವಿಷಯ ತಿಳಿಸುವ, ಊರಿನ ಸಂಪರ್ಕ ಉಳಿಸಿಕೊಳ್ಳುವ, ಮಾಧ್ಯಮವಾಗಿ ಸುದ್ದಿ ಬಿಡುಗಡೆ ಪುತ್ತೂರಿನವರ ಪ್ರೀತಿಗೆ, ಅಭಿಮಾನಕ್ಕೆ ಕಾರಣವಾಗಿದೆ.


ಇಂದಿನ ಸಾಮಾಜಿಕ ಜಾಲತಾಣದ, ಮೊಬೈಲ್‌ನ ಯುಗದಲ್ಲಿ ಪತ್ರಿಕೆ ಮತ್ತು ಪುಸ್ತಕ ಓದುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ, ಯುವಕರಲ್ಲಿ, ಪ್ರತಿಯೊಬ್ಬರಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವ ಅಗತ್ಯವಿದೆ. ಅದಕ್ಕಾಗಿ ಮನೆ ಮನೆಗೆ, ಊರಿನವರಿಗೆ, ಪ್ರೀತಿ ಪಾತ್ರರಿಗೆ, ಸಂಘ ಸಂಸ್ಥೆಗಳಿಗೆ ಸುದ್ದಿಬಿಡುಗಡೆ ಪತ್ರಿಕೆಯನ್ನು ಒಂದು ವರ್ಷದ ಅವಽಗೆ ಪ್ರತೀ ವಾರಕ್ಕೆ ಎರಡು ಬಾರಿ ಅಥವಾ ಪ್ರತಿ ದಿನ ಕೊಡುಗೆಯಾಗಿ ಕೊಡುವ ವಿಶಿಷ್ಠ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಆ ಪ್ರತೀ ಪತ್ರಿಕೆಯಲ್ಲಿ ಕೊಡುಗೆ ಕೊಟ್ಟವರ ಹೆಸರು ಇರುವುದರಿಂದ ಕೊಡುಗೆ ಕೊಟ್ಟವರನ್ನು ನೆನಪಿಸಿಕೊಳ್ಳುವಂತೆ ಮಾಡುವ ಯೋಜನೆಯನ್ನು ಯಶಸ್ಸು ಗೊಳಿಸಬೇಕಾಗಿ, ಪುತ್ತೂರನ್ನು ಜಗತ್ತಿನಾದ್ಯಂತ ಇರುವ ಪುತ್ತೂರಿನವರ ಹೆಮ್ಮೆಯ ಮಾಧ್ಯಮ ತಾಲೂಕನ್ನಾಗಿ ಮಾಡಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಯೋಜನೆಯ ಸಲುವಾಗಿ ಸುದ್ದಿಯ ಸಿಬ್ಬಂದಿಗಳು ಭೇಟಿ ನೀಡಿದಾಗ ಪತ್ರಿಕೆಯ ಗುಣಮಟ್ಟವನ್ನು ಸುಧಾರಿಸುವ, ಎತ್ತರಿಸುವ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು, ಸಲಹೆ, ಸೂಚನೆಗಳನ್ನು ನೀಡುವಂತೆ ಕೇಳಿಕೊಳ್ಳುತ್ತಿದ್ದೇನೆ.



ವಿ.ಸೂ: ಸುಳ್ಯ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಗಳ ಕೊಡುಗೆ ಯೋಜನೆ ಇದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಸುದ್ದಿಬಿಡುಗಡೆ ಪತ್ರಿಕೆಯ ವಾರ್ಷಿಕ ಚಂದಾ ದರ
* ಸುಳ್ಯ ರೂ. 3೦೦/-
* ಬೆಳ್ತಂಗಡಿ ರೂ. 3೦೦/-
* ಪುತ್ತೂರು ವಾರಕ್ಕೆ 2 ಬಾರಿ 3೦೦/- (ಪ್ರತಿ ಸೋಮವಾರ, ಗುರುವಾರ)
* ಪ್ರತಿ ದಿನ 1,050 ಮಾತ್ರ








