ಬಡಗನ್ನೂರು: ಗೆಜ್ಜೆಗಿರಿ ಕ್ಷೇತ್ರಕ್ಕೆ ಗುಜರಾತ್-ಮಹಾರಾಷ್ಟ್ರ ಉದ್ಯಮಿಗಳ ಭೇಟಿ

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಮೇ 8ರಂದು ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಹಾಗೂ ಮಹಾರಾಷ್ಟ್ರದ ನಾಸಿಕ್‌ನ ಉದ್ಯಮಿ, ಕೊಡುಗೈದಾನಿ ಗಂಗಾಧರ ಅಮೀನ್ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಇತ್ತೀಚೆಗೆ ಶಿಲಾನ್ಯಾಸಗೊಂಡ ದೇಯಿ ಬೈದೆತಿ ಆಯುರ್ವೇದಿಕ್ ಕೇಂದ್ರ ಮತ್ತು ಯಾತ್ರಿ ಸಮುದಾಯ ಭವನದ ಕಾಮಗಾರಿ ಪ್ರಗತಿ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಕೋಟಿ-ಚೆನ್ನಯರ ಗರಡಿ, ಆದಿ ಧೂಮಾವತಿ ಮತ್ತು ದೇಯಿ ಬೈದೆತಿ ಅಮ್ಮನವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕ್ಷೇತ್ರದ ವತಿಯಿಂದ ಅವರನ್ನು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಜಯಂತ ನಡುಬೈಲ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಶ್ರೀಧರ ಪೂಜಾರಿ, ಉಲ್ಲಾಸ್ ಕೋಟ್ಯಾನ್, ಡಾ. ರಾಜಾರಾಮ್, ನಾರಾಯಣ ಮಚ್ಚಿನ, ಜಯರಾಮ ಬಂಗೇರ ಹೆರಾಜೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here