







ಬಡಗನ್ನೂರು: ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕೆಂಪು ಕೇಪುಲಾಜೆ ನಾಗಬ್ರಹ್ಮ ದೇವಸ್ಥಾನ ಮತ್ತು ಮೊಗೇರ್ಕಳ ದೈವಸ್ಥಾನ ನಿರ್ಮಾಣ ಕಾರ್ಯ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ತಿಳಿಸಿದಂತೆ ಸಂಕಲ್ಪಿಸಿ, ಆರು ಜಿಲ್ಲೆಗಳ ಮೊಗೇರ ಬಾಂಧವರ ಸಹಕಾರದೊಂದಿಗೆ ನಡೆಯುತ್ತಿದೆ.


ದೈವ ಸಂಕಲ್ಪದಂತೆ, ಹಿಂದೆ ನಡೆದ ಸ್ವರ್ಣ ಪ್ರಶ್ನಾ ಚಿಂತನೆಯ ವೇಳೆ ಬ್ರಹ್ಮರಗುಂಡ ಸ್ಥಳಕ್ಕೆ ಸಂಬಂಧಿಸಿದಂತೆ ಪೂರ್ವ ಭಾಗದಲ್ಲಿ ಮುದ್ದ-ಕಳಲರನ್ನು ಚಿತೆಗೆ ಅರ್ಪಿಸಿದ ಸಮಾಧಿ ಇರುವ ಜಾಗದ ಬಗ್ಗೆ ಉಲ್ಲೇಖವಾಗಿತ್ತು. ದೈವಜ್ಞರು ತಿಳಿಸಿದ ಲಕ್ಷಣಗಳ ಪ್ರಕಾರ ಆ ಜಾಗದ ವಿಶೇಷತೆ, ವೈಶಿಷ್ಟ್ಯಗಳನ್ನು ಪ್ರಶ್ನಾ ಚಿಂತನೆಯ ಮೂಲಕ ತಿಳಿಯುವ ಅವಶ್ಯಕತೆ ಇದೆ ಎಂದು ಕಂಡುಬಂದಿದೆ.



ಈ ಹಿನ್ನೆಲೆಯಲ್ಲಿ ಪಡುಮಲೆಯ “ಏರಾಜೆ”ಯ ಪುಣ್ಯ ಮಣ್ಣಿನಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಮತ್ತು ಕೋಟಿ ಚೆನ್ನಯ ಜನ್ಮಸ್ಥಳ ಮೂಲಸ್ಥಾನ ಟ್ರಸ್ಟ್ ಪಡುಮಲೆ ಇವರ ಸಹಭಾಗಿತ್ವದಲ್ಲಿ ದೇಯಿ ಬೈದೆದಿ ಮೂಲಸ್ಥಾನ ಹಾಗೂ ನಾಗ ಬೆರ್ಮೆರ ಮೂಲಸ್ಥಾನ ಪಡುಮಲೆಯಲ್ಲಿ ಮೇ 9ರ ಶನಿವಾರ ಪ್ರಶ್ನಾ ಚಿಂತನೆ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.










