ಪರಂಪರೆ ಮತ್ತು ಆಧುನಿಕತೆಯ ಸಮ್ಮಿಲನ : ನಂಬಿಕೆಯ ಸುವರ್ಣ ಹಾದಿಯಲ್ಲಿ ‘ಮಂಗಳೂರು ಜ್ಯುವೆಲ್ಸ್’

0

ಮುತ್ತಿನ ನಗರಿಗೆ ಕಾಲಿಟ್ಟಿದೆ ‘ಮಂಗಳೂರು ಜ್ಯುವೆಲ್ಸ್’ ; ಅಂದಕ್ಕೂ ಮಿಗಿಲಾದ ವಿಶ್ವಾಸ

ನಮ್ಮ ಕರಾವಳಿಯ ಮಣ್ಣಿನ ಸಂಸ್ಕೃತಿ ಮತ್ತು ಕಲೆಯು ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದಿದೆ. ಆಭರಣ ಎಂದರೆ ಕೇವಲ ಲೋಹದ ತುಣುಕಲ್ಲ; ಅದು ಭಾವನೆಗಳ ಪ್ರತೀಕ, ಸಂಸ್ಕೃತಿಯ ಪ್ರತಿಬಿಂಬ. ಅಂತಹ ಕಲಾತ್ಮಕ ಭಾವನೆಗಳಿಗೆ ಜೀವ ತುಂಬುತ್ತಾ, ಕರಾವಳಿಯ ಕಲಾ ವೈಭವವನ್ನು ಜಗತ್ತಿಗೆ ಸಾರುತ್ತಿರುವ ಸಂಸ್ಥೆ ‘ಮಂಗಳೂರು ಜ್ಯುವೆಲ್ಸ್’. ಹಳೆಯ ವಿನ್ಯಾಸಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ, ಹೊಸ ತಲೆಮಾರಿನವರು ಇಷ್ಟಪಡುವಂತೆ ರೂಪಿಸುವುದು ಇವರ ಕಲೆಗಾರಿಕೆಯ ವಿಶೇಷ.

ಮಂಗಳೂರು ಜ್ಯುವೆಲ್ಸ್‌ನ ಬೇರುಗಳು ಮೈಸೂರು ಅರಮನೆಯ ಇತಿಹಾಸದೊಂದಿಗೆ ಬೆಸೆದುಕೊಂಡಿವೆ. ಅರಮನೆಯ ಆಸ್ಥಾನದ ಕುಶಲಕರ್ಮಿಗಳಾಗಿದ್ದ ಪೂರ್ವಜರ ಕಲಾ ನೈಪುಣ್ಯವು ಇಂದಿಗೂ ಇವರ ಪ್ರತಿಯೊಂದು ಆಭರಣದಲ್ಲೂ ಎದ್ದು ಕಾಣುತ್ತದೆ. 1995ರಲ್ಲಿ ಡಿ. ನಾಗರಾಜ್ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ಇಂದು ಬೆಂಗಳೂರು ಮತ್ತು ಮಂಗಳೂರಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ಪ್ರಸ್ತುತ ವಿಕ್ರಮ್ ಆಚಾರ್ ಅವರ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯು ವಿಶ್ವಾಸಾರ್ಹತೆಯ ಶಿಖರಕ್ಕೇರಿದೆ. ಇದೀಗ ಈ ಸಂಸ್ಥೆ ಮುತ್ತಿನ ನಗರಿ ಎಂದೇ ಖ್ಯಾತಿ ಪಡೆದಿರುವ ಪುತ್ತೂರಿಗೂ ಪಾದಾರ್ಪಣೆಗೈದಿದೆ.

ಹಲವಾರು ವಿಶೇಷತೆಗಳನ್ನು ಹೊಂದಿರುವ ಚಿನ್ನಾಭರಣ ಮಳಿಗೆ ಮಂಗಳೂರು ಜ್ಯುವೆಲ್ಸ್ ಏ.24ರಂದು ಪುತ್ತೂರಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿದೆ.

ಮಂಗಳೂರು ಜ್ಯುವೆಲ್ಸ್ ಶುದ್ಧತೆ, ಸೌಂದರ್ಯ ಮತ್ತು ವಿನ್ಯಾಸದಲ್ಲಿ ನವೀನತೆಯನ್ನು ಅಳವಡಿಸಿಕೊಂಡು ಇಂದಿನ ಪೀಳಿಗೆಯ ಗ್ರಾಹಕರ ಅಭಿರುಚಿಗೆ ತಕ್ಕ ಅಭರಣಗಳನ್ನು ತಯಾರಿಸುತ್ತಿದೆ. ದೀರ್ಘಕಾಲದ ನಂಬಿಕೆ ಮತ್ತು ಗ್ರಾಹಕ ಸ್ನೇಹಿ ಸೇವೆಯಿಂದ ಮಂಗಳೂರು ಜ್ಯುವೆಲ್ಸ್ ಸಾವಿರಾರು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಪಾರದರ್ಶಕ ವ್ಯವಹಾರ, ಮಾರಾಟ ನಂತರದ ಸೇವೆಗಳಲ್ಲಿ ಸಂಸ್ಥೆಗೆ ವಿಶಿಷ್ಠ ಹೆಸರು ಬಂದಿದೆ. ಪುತ್ತೂರಿನಲ್ಲಿ ಶಾಖೆ ಪ್ರಾರಂಭಿಸುವ ಮುಖಾಂತರ ಗ್ರಾಹಕರಿಗೆ ಇನ್ನಷ್ಟು ಸಮೀಪವಾಗಿ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶ ಹೊಂದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡಿದ ಆಭರಣ ವಿನ್ಯಾಸಗೊಳಿಸುವ ವಿಶೇಷ ಸೇವೆ ಮಂಗಳೂರು ಜ್ಯುವೆಲ್ಸ್‌ನ ವಿಶೇಷ ಆಕರ್ಷಣೆಯಾಗಿದೆ.

ಲೈಟ್ ವೈಟ್ ಜ್ಯುವೆಲ್ಲರಿ ಇಲ್ಲಿನ ವಿಶೇಷತೆ
ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡು ಗ್ರಾಹಕರಿಗೆ ಬೇಕಾದ ರೀತಿಯ ಸೇವೆ ನೀಡುತ್ತಾ ಬಂದಿರುವ ಮಂಗಳೂರು ಜ್ಯುವೆಲ್ಸ್, ಚಿನ್ನಾಭರಣವನ್ನು ಮಾರಾಟ ಮಾಡುವವರಿಗೂ ಉತ್ತಮ ಬೆಲೆ ನೀಡುತ್ತಿದ್ದು, ಅದೇ ರೀತಿ ಚಿನ್ನಾಭರಣ ಕೊಳ್ಳುವವರಿಗೂ ಅತೀ ಕಡಿಮೆ ತಯಾರಿಕಾ ಶುಲ್ಕದಲ್ಲಿ ನೀಡುತ್ತಲಿದೆ. ಲೈಟ್ ವೈಟ್ ಜ್ಯುವೆಲ್ಲರಿ ಮಂಗಳೂರು ಜ್ಯುವೆಲ್ಸ್ ನ ವಿಶೇಷತೆಯಾಗಿದ್ದು, ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವ ಈ ಕಾಲಘಟ್ಟದಲ್ಲಿ ಲೈಟ್ ವೈಟ್ ಜ್ಯುವೆಲ್ಲರಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಕಡಿಮೆ ಬೆಲೆಯಲ್ಲಿ ಉತ್ತಮ ವಿನ್ಯಾಸದ ಲೈಟ್ ವೈಟ್ ಜ್ಯುವೆಲ್ಲರಿಗಳ ಭರಪೂರ ಸಂಗ್ರಹವೇ ಇಲ್ಲಿದೆ.

ಚಿನ್ನಾಭರಣ ಉಳಿತಾಯ ಯೋಜನೆ
ಸಂಸ್ಥೆಯಲ್ಲಿ ಚಿನ್ನಾಭರಣ ಉಳಿತಾಯ ಯೋಜನೆಯೂ ಲಭ್ಯವಿದ್ದು, ಪ್ರತೀ ದಿನ ತಮಗಿಷ್ಟ ಬಂದ ಹಣವನ್ನು ಹನ್ನೊಂದು ತಿಂಗಳು ಪಾವತಿಸಬಹುದಾಗಿದೆ. ಆಯಾ ದಿನದ ಚಿನ್ನದ ದರದಲ್ಲಿ ನಿಮ್ಮ ಖಾತೆಗೆ ಚಿನ್ನ ಜಮಾವಣೆಯಾಗಲಿದೆ. ಸಂಸ್ಥೆಯು ಕೊನೆಗೆ ಬೋನಸ್ ಕೂಡ ನೀಡಲಿದೆ. ಆ ಬಳಿಕ ತಮಗಿಷ್ಟ ಬಂದ ಚಿನ್ನದ ಆಭರಣಗಳನ್ನು ಕೊಂಡುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ತಯಾರಿಕಾ ವೆಚ್ಚದಲ್ಲಿ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ. ಗ್ರಾಹಕರಿಗೆ ಸಹಕಾರಿಯಾಗಲೆಂದು ಆಪ್ ವ್ಯವಸ್ಥೆಯನ್ನು ಮಾಡಲಾಗಿದ್ದು, ತಮ್ಮ ಮೊತ್ತವನ್ನು ತಮ್ಮ ಅಕೌಂಟ್‌ಗೆ ಆಪ್ ಮೂಲಕವೂ ಜಮಾವಣೆ ಮಾಡಬಹುದಾಗಿದೆ.

ಸಂಸ್ಥೆಯ ವಿಸ್ತರಣೆ – ಯೋಜನೆ
ಇ-ಕಾಮರ್ಸ್ ಪ್ಲಾಟ್ ಫಾರ್ಮ್ 2026ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ. ಡಿಜಿಟಲ್ ಚಿನ್ನ/ಬೆಳ್ಳಿ ಈಗಾಗಲೇ ಜಾರಿಗೆ ತಂದಿರುವ ಅನುಪಾತದ ಖರೀದಿ ವ್ಯವಸ್ಥೆ. ಆಂತರಿಕ ಉತ್ಪಾದನಾ ತಂಡವನ್ನು ವಿಸ್ತರಿಸುವುದು. 5 ಹೆಚ್ಚುವರಿ ಪೂರ್ಣ ಪ್ರಮಾಣದ ಆಭರಣ ಮಳಿಗೆಗಳನ್ನು ತೆರೆಯುವುದು. ಹಾಗೂ 25 ಚಿನ್ನ ಖರೀದಿ ಘಟಕಗಳನ್ನು ಆರಂಭಿಸುವುದು ಮೊದಲಾದ ಯೋಜನೆಗಳನ್ನು ಸಂಸ್ಥೆ ಹಾಕಿಕೊಂಡಿದೆ.

ವೈವಿಧ್ಯಮಯ ಸಂಗ್ರಹ
ಇಲ್ಲಿ ಬರೀ ಬಂಗಾರವಲ್ಲ, ಬದಲಾಗಿ ಕಲೆ ಅರಳುತ್ತದೆ. 916 ಹಾಲ್‌ಮಾರ್ಕ್ ಚಿನ್ನದ ಜೊತೆಗೆ, ಅಪರೂಪದ ವಜ್ರದ ಹರಳುಗಳು, ಶುದ್ಧ ಬೆಳ್ಳಿ ಮತ್ತು ಲೈಟ್ ವೇಟ್ (ಹಗುರವಾದ) ಆಭರಣಗಳ ಅಪಾರ ಸಂಗ್ರಹ ಇಲ್ಲಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣಗಳನ್ನು ವಿನ್ಯಾಸಗೊಳಿಸಿಕೊಡುವಲ್ಲಿ (Customisation) ಇವರು ಪರಿಣಿತರು.

ಗ್ರಾಹಕ ಸ್ನೇಹಿ ಸೇವೆ
ಗ್ರಾಹಕರ ತೃಪ್ತಿಯೇ ಪರಮ ಗುರಿ ಎಂಬ ಮಾತಿನಂತೆ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಜ್ಯುವೆಲ್ಸ್ ಸಂಸ್ಥೆ, ಬೆಳ್ಳಿಯ ಆಭರಣಗಳಿಗೂ ವಿಶೇಷ ಪ್ರಾಮುಖ್ಯತೆ ನೀಡುತ್ತಿದೆ. ಕರಾವಳಿ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಭರಣ ಮಳಿಗೆಗಳ ನಡುವೆ, ನಂಬಿಕೆ ಮತ್ತು ಗುಣಮಟ್ಟದಿಂದಾಗಿ ಇದು ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ.

Shop On Online..
https://www.mangalorejewels.in/gold-jewellery

Instagram
https://www.instagram.com/mangalore_jewels/

LEAVE A REPLY

Please enter your comment!
Please enter your name here