ಕಡಬ ವಲಯ ಮಟ್ಟದ ಶಾಲಾ ದಾಖಲಾತಿ ಆಂದೋಲನ

0

ರಾಮಕುಂಜ: ಕಡಬ ವಲಯ ಮಟ್ಟದ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ಮೇ ೧೮ರಂದು ರಾಮಕುಂಜ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು.


ರಾಮಕುಂಜ ಗ್ರಾ.ಪಂ.ಕಾರ್ಯದರ್ಶಿ ಲಲಿತ ಅವರು ಶಾಲಾ ದಾಖಲಾತಿ ಆಂದೋಪನಕ್ಕೆ ಚಾಲನೆ ನೀಡಿದರು. ಬಳಿಕ ಹತ್ತಿರದ ಮನೆಗಳಿಗೆ, ಅಂಗಡಿಗಳಿಗೆ, ವಾಹನ ಸವಾರರಿಗೆ ಹಸ್ತ ಪ್ರತಿಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಯಿತು. ಸ್ವಚ್ಛತಾ ವಾಹನದ ಮೂಲಕ ಆಂದೋಲನದ ಗೀತೆಗಳನ್ನು ಪ್ರಚಾರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೀತಾ, ರತ್ನಕುಮಾರಿ, ನಾಗೇಶ್ ಪಾಟಾಳಿ ಉಪಸ್ಥಿತರಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್ ವೈ, ಪರಮೇಶ್ವರಿ, ಪ್ರಕಾಶ್ ಬಾಕಿಲ ಮತ್ತು ಮಹೇಶ ಎಂ. ಅವರು ಕಾರ್ಯಕ್ರಮದ ಉದ್ದೇಶ ಮತ್ತು ಘೋಷಣೆಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ಊರವರು, ಮಕ್ಕಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here