ಪೆರಿಯತ್ತೋಡಿ: ಜಾತಿ ನಿಂದನೆ-ಪ್ರಕರಣ ದಾಖಲು

0

ಪುತ್ತೂರು: ಪುತ್ತೂರು ಕಸಬ ಗ್ರಾಮದ ಪರಿಯತ್ತೋಡಿ ಎಂಬಲ್ಲಿ ಕೆಲಸಮಾಡುತ್ತಿದ್ದ ವೇಳೆ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಬಕ ಗ್ರಾಮದ ಅಣ್ಣು ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪೆರಿಯತ್ತೋಡಿ ಎಂಬಲ್ಲಿ ದಿನೇಶ್ ಮಯ್ಯ ಎಂಬವರಿಗೆ ಸೇರಿದ ಜಾಗದಲ್ಲಿ ಕೆಲಸ ಮಾಡುತ್ತಿದ್ದಾಗ ದಿವಾಕರಾ ಅಚಾರ್ಯ ಮತ್ತು ಅವರ ಪತ್ನಿ ಜಯಂತಿ ಅವರು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here