






ಕಾಣಿಯೂರು: 2026ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳು ಬಂದಿರುತ್ತದೆ. ವಿದ್ಯಾರ್ಥಿಗಳಾದ ವಿಜ್ಞಾತ್ರಿ ಬಿ ಈ ಹಿಂದೆ 595 ಅಂಕಗಳನ್ನು ಪಡೆದಿದ್ದು ಇದೀಗ 12 ಅಂಕಗಳು ಹೆಚ್ಚುವರಿಯಾಗಿ 607 ಅಂಕಗಳು ಬಂದಿರುತ್ತವೆ. ಕಿಶನ್ ಓ 601 ಅಂಕಗಳ ಬದಲಿಗೆ 604 ಅಂಕಗಳನ್ನು ಪಡೆದಿರುತ್ತಾರೆ. ನಿತೀಶ್ ಬಿ 558 ಅಂಕಗಳ ಬದಲಿಗೆ 564 ಅಂಕಗಳನ್ನು ಪಡೆದಿರುತ್ತಾರೆ. ಹಾಗೆಯೇ ಯಜ್ಞೇಶ್ ಪಿ 499 ಅಂಕಗಳ ಬದಲಿಗೆ 509 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆ. ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.















